Tuesday, February 17, 2026
Google search engine

Homeರಾಜ್ಯವಿದೇಶದಲ್ಲೂ 'ಗಡಿಯಾರ್' ಮಾನವೀಯ ಕಾರ್ಯ:ಸೋಮಾಲಿ ಲ್ಯಾಂಡ್ ನಲ್ಲಿ ಗಡಿಯಾರ್ ಫೌಂಡೇಶನ್ ನಿಂದ ನೀರು, ಆಹಾರ ತಿನಿಸುಗಳ...

ವಿದೇಶದಲ್ಲೂ ‘ಗಡಿಯಾರ್’ ಮಾನವೀಯ ಕಾರ್ಯ:ಸೋಮಾಲಿ ಲ್ಯಾಂಡ್ ನಲ್ಲಿ ಗಡಿಯಾರ್ ಫೌಂಡೇಶನ್ ನಿಂದ ನೀರು, ಆಹಾರ ತಿನಿಸುಗಳ ವಿತರಣೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಸದ್ಯ ದುಬೈನಲ್ಲಿರುವ ಖ್ಯಾತ ಗಡಿಯಾರ್ ಗ್ರೂಪ್ ಆಪ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗಡಿಯಾರ್ ಚಾರಿಟಿ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಇಬ್ರಾಹಿಂ ಗಡಿಯಾರ್ ವಿದೇಶದಲ್ಲೂ ಮಾನವೀಯ ಕಾರ್ಯ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು. ಸೋಮಾಲಿ ಲ್ಯಾಂಡ್ ನಲ್ಲಿ ಇಬ್ರಾಹಿಂ ಗಡಿಯಾರ್ ನೇತೃತ್ವದ ತಂಡವು ಬಡ ಜನರು ಇರುವ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಬಡ ಮಂದಿಗೆ, ಮಕ್ಕಳಿಗೆ, ಮಹಿಳೆಯರಿಗೆ ವೃದ್ದರಿಗೆ ಉಚಿತವಾಗಿ ನೀರು, ಬ್ರೆಡ್, ಬಿಸ್ಕಿಟ್, ಚಾಕೋಲೇಟ್ಸ್, ಬಾಳೆಹಣ್ಣನ್ನು ವಿತರಿಸಿ ಮಾನವೀಯ ನೆರವು ನೀಡಿದರು. ಇದೇ ವೇಳೆ ಅಲ್ಲಿನ ಜನರೊಂದಿಗೆ ಕೆಲ ಸಮಯ ಬೆರೆತು ಮಾತುಕತೆ ನಡೆಸಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular