Wednesday, February 18, 2026
Google search engine

Homeರಾಜ್ಯಸುದ್ದಿಜಾಲಬೂದಿ ಬುಧವಾರ ಬಂತು: ಕ್ರೈಸ್ತರಿಗೆ ತಪಸ್ಸು ಕಾಲ ಆರಂಭ.

ಬೂದಿ ಬುಧವಾರ ಬಂತು: ಕ್ರೈಸ್ತರಿಗೆ ತಪಸ್ಸು ಕಾಲ ಆರಂಭ.

ವರದಿ :ಸ್ಟೀಫನ್ ಜೇಮ್ಸ್.

ಕ್ರೈಸ್ತರಿಗೆ ತಪಸ್ಸು ಕಾಲ ಆರಂಭ. ಬುಧವಾರದಂದು ಪ್ರಾರಂಭವಾಗುವ ಆಚರಣೆ 40 ದಿನಗಳವರೆಗೆ ಇರುತ್ತದೆ.

ಇದನ್ನು ಬೂದಿ ಬುಧವಾರ ಅಥವಾ ಆ್ಯಷ್‌ ವೆನ್ಸ್‌ಡೇ ಎಂದು ಕರೆಯುತ್ತಾರೆ. ಅಂದರೆ ಈ ದಿನದಿಂದ ಗುಡ್‌ಫ್ರೈಡೇಯವರಿಗೆ ಕ್ರೈಸ್ತರು ತ್ಯಾಗ ಜೀವನ ನಡೆಸುತ್ತಾರೆ. ಮಾಂಸಾಹಾರದಿಂದ ದೂರವಿರುತ್ತಾರೆ. ಮಾದಕ ವಸ್ತುಗಳಿಂದ ದೂರವಿರುತ್ತಾರೆ. ಪಾರ್ಟಿಗಳು, ಔತಣ ಕೂಡಗಳನ್ನು ಏರ್ಪಡಿಸುವುದಿಲ್ಲ.

ಬೂದಿ ಬುಧವಾರದಂದು ಚರ್ಚ್‌ಗೆ ತೆರಳಿ ಯೇಸುವನ್ನು ಆರಾಧಿಸಿ ಪಾದ್ರಿ ಮುಂದೆ ಸಾಲಾಗಿ ನಿಲ್ಲುತ್ತಾರೆ. ಪಾದ್ರಿ ಬೂದಿ ಬಟ್ಟಲನ್ನು ಕೈಯಲ್ಲಿ ಹಿಡಿದು, ಅದರಿಂದ ಸ್ವಲ್ಪ ಬೂದಿ ತೆಗೆದು ಎಲ್ಲರ ಹಣೆಗೆ ಶಿಲುಬೆ ಆಕಾರದಲ್ಲಿ ಬರೆಯುತ್ತಾರೆ.ಮಣ್ಣಿ ನಿಂದ ಬಂದ ದೇಹವಿದು, ಮರಳಿಗೆ ಮಣ್ಣಿಗೆ ಸೇರುತ್ತದೆ ಎಂಬ ಅರ್ಥದ ಹಾಡುಗಳನ್ನು ಹೇಳುತ್ತಾರೆ. ಇದು ತ್ಯಾಗದ ಸಂಕೇತವಾಗಿದ್ದು, ಮೋಜು ಮಸ್ತಿಗೆ ಖರ್ಚು ಮಾಡುವ ದುಡ್ಡನ್ನು ಬಡಬಗ್ಗರಿಗೆ ದಾನ ಮಾಡಬೇಕು ಎಂಬ ಆಶಯ ಈ ಆಚರಣೆ ಹಿಂದಿದೆ. ಕ್ರೈಸ್ತರ ಆಚರಣೆ ಯಂತೆ ಪ್ರತಿ ಬುಧವಾರ ಮತ್ತು ಶುಕ್ರವಾರ ಶಿಲುಬೆಯ ಹಾದಿ (way of the cross) ನೆಡೆಯುತ್ತದೆ. 40 ದಿನಗಳ ನಂತರ ಶುಭ ಶುಕ್ರವಾರ (GOOD FRIDAY ) ನಂತರ ಯೇಸು ಕ್ರಿಸ್ತರು ಪುನಃರುತ್ತಾನ ರಾದ ದಿನವನ್ನು ಈಸ್ಟರ್ ಹಬ್ಬವಾಗಿ ಕೊಂಡಾಡುತ್ತಾರೆ.

RELATED ARTICLES
- Advertisment -
Google search engine

Most Popular