ಮಂಗಳೂರು : ಕುಪ್ಮ ಕರ್ನಾಟಕದ ನಿಯೋಗವು ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕುಪ್ಮ ಕಳೆದ ೨ ವರ್ಷಗಳಿಂದ ಸಲ್ಲಿಸಿರುವ ಮನವಿಯ ಕುರಿತಂತೆ ನಡೆದಿರುವ ಪ್ರಗತಿಯ ಬಗ್ಗೆ ಚರ್ಚೆಯನ್ನು ನಡೆಸಿತು.
ಈ ವೇಳೆ ಮಾನ್ಯ ಸಚಿವರು ಕುಪ್ಮ ನಿಯೋಗದ ಜೊತೆ ಸಕಾರಾತ್ಮಕ ನೀಡಿ, ಪದವಿ ಪೂರ್ವ ಹಂತದಲ್ಲಿಆಗಬೇಕಾದ ಅನೇಕ ಬದಲಾವಣೆಗಳ ಕುರಿತಂತೆ ವಿಸ್ತೃತವಾದ ಚರ್ಚೆಯನ್ನು ನಡೆಸಿದ ಸಚಿವರು ನಮ್ಮಇಲಾಖೆಯ ನಿರ್ದೇಶಕರು ಸೇರಿದಂತೆ ಎಲ್ಲಾ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ವರ್ಷದಲ್ಲಿ ೨ ಬಾರಿ ಕುಪ್ಮದ ಜೊತೆ ಸಭೆ ನಡೆಸಲು ಶಾಲಾ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಿದರು.
ಈಗಾಗಲೇ ರಾಜ್ಯದಲ್ಲಿ ಸುಮಾರು ೪೦೦೦ ಕ್ಕೂ ಹೆಚ್ಚು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸರಿ ಸುಮಾರು ಶೇಕಡಾ ೬೩ ರ? ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದುಉತ್ತಮಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಮತ್ತು ಉತ್ತಮ ಫಲಿತಾಂಶ ನೀಡಿ ಶಿಕ್ಷಣ ಇಲಾಖೆಗೆ ಗಣನೀಯವಾದ ಕೊಡುಗೆಯನ್ನು ನೀಡುವ ಮಹತ್ವಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ.
ಈ ರೀತಿಯ ಉತ್ತಮ ಶಿಕ್ಷಣ ನೀಡುವಲ್ಲಿ, ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬುದನ್ನು ಮಾನ್ಯ ಸಚಿವರ ಗಮನಕ್ಕೆ ತರಲಾಯಿತು.
ಇನ್ನೂ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಬಗ್ಗೆ ಮಾನ್ಯ ವಿಧಾನ ಸಭಾ ಸಭಾಧ್ಯಕ್ಷರ ಸಮಕ್ಷಮದಲ್ಲಿ ಮಾನ್ಯ ಶಿಕ್ಷಣ ಸಚಿವರು ಮತ್ತು ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನಾಂಕ: ೧೪-೦೭-೨೦೨೪ಮತ್ತು ೧೫-೦೫-೨೦೨೫ರಂದು ನಡೆದಿದ್ದ ಸಭೆಯಲ್ಲಿ ಕುಪ್ಮಾ ಪದಾಧಿಕಾರಿಗಳು ಭಾಗವಹಿಸಿ, ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾನ್ಯ ಶಿಕ್ಷಣ ಮಂತ್ರಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಡಿಜಿಲಾಕರ್ ಮೂಲಕ ಮುಂದಿನ ದಿನಗಳಲ್ಲಿ ವಿತರಿಸುವ ಬಗ್ಗೆ ಅದರ ಸಾಧಕ ಬಾಧಕಗಳನ್ನು ಕುಪ್ಮದ ಜೊತೆ ಚರ್ಚಿಸಬೇಕೆಂದು ಮನವಿಯನ್ನು ಮಾಡಲಾಯಿತು. ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣದ ಅಂಕಪಟ್ಟಿಯಲ್ಲಿ ಕಾಲೇಜಿನ ಮಾನ್ಯ ಪ್ರಾಂಶುಪಾಲರ ಸಹಿ ಮತ್ತು ಮೊಹರಿನೊಂದಿಗೆಅಂಕಪಟ್ಟಿಯನ್ನು ವಿತರಿಸಬೇಕೆಂದು ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾನ್ಯ ಸಚಿವರ ಸೂಚನೆಯಂತೆ ಶಾಲಾ ಶಿಕ್ಷಣ ನಿರ್ದೇಶಕ ಭರತ್ ಅವರ ಜೊತೆ ಸಭೆ ನಡೆಸಿದಾಗ ಮಾನ್ಯ ನಿರ್ದೇಶಕರು ಕುಪ್ಮ ಸದಸ್ಯರೊಂದಿಗೆ ಮಾರ್ಚ್ ತಿಂಗಳಲ್ಲಿ ಸಭೆ ನಡೆಸಲು ಒಪ್ಪಿಗೆಯನ್ನು ಸೂಚಿಸಿದರು.
ಈ ಹಿಂದಿನ ಬೇಡಿಕೆಗಳಿಗೆ ಸಂಬಂಧ ಪಟ್ಟಹಾಗೆ ಶಾಲಾ ಶಿಕ್ಷಣ ಇಲಾಖೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಳಾಂತರ ಮತ್ತು ಹಸ್ತಾಂತರದ ಅಧಿಕಾರವನ್ನು ಶಾಲಾ ಶಿಕ್ಷಣ ಇಲಾಖೆ ಹಂತದಲ್ಲಿ ಅನಮೋದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಹೊಸ ಖಾಸಗಿ ಅನುದಾನ ರಹಿತ ಕಾಲೇಜನ್ನು ಪ್ರಾರಂಭ ಮಾಡುವ ಪ್ರಕ್ರಿಯೆಯನ್ನುಆನ್‌ಲೈನ್ ಮೂಲಕ ಈ ಹಿಂದೆಇದ್ದ ೪೬ ಅಂಶಗಳ ಅರ್ಜಿ ನಮೂನೆಯನ್ನು ೨೩ ಅಂಶಗಳಿಗೆ ಸರಳೀಕರಿಸಲಾಗಿದೆ.
ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಹೊಸ ಸಂಯೋಜನೆ, ಭಾಷೆ ಮತ್ತು ಹೆಚ್ಚುವರಿ ವಿಭಾಗಗಳ ಅರ್ಜಿಯನ್ನು ಸಂಪೂರ್ಣವಾಗಿ ಆನ್‌ಲೈನ್ ಪ್ರಕ್ರಿಯೆಗೊಳಿಸಿದ್ದು ಅರ್ಜಿಯಲ್ಲಿ ಈ ಹಿಂದೆ ೩೬ ಅಂಶಗಳ ಅರ್ಜಿ ನಮೂನೆಯನ್ನು ೨೩ ಅಂಶಗಳಿಗೆ ಸರಳೀಕರಿಸಲಾಗಿದೆ.
೨೦೨೪ರ ನಿಯಮಾವಳಿ ಪ್ರಕಾರ ಹೊಸ ಶಾಶ್ವತ ಅನುದಾನ ರಹಿತ ಕಾಲೇಜುಗಳ ಸ್ಥಳ ಪರಿಶೀಲನೆಯನ್ನುಒಟ್ಟು ಅರ್ಜಿಗಳಲ್ಲಿ ಶೇಕಡ ೫ ರಷ್ಟು ಮೂಲಕ ನಡೆಸಲಾಗುತ್ತಿತ್ತು ಹಾಗೂ ಕಳೆದ ೫ ವರ್ಷಗಳ ವರೆಗೆ ಹೊಸ ಸಂಯೋಜನೆ/ಭಾಷೆಗೆ ಸಂಬಂಧಿಸಿದ ಅರ್ಜಿಗಳನ್ನು ಶೇಕಡ ೧೦೦ ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಿಂದ ಹೊಸ ಸಂಯೋಜನೆ / ಭಾಷೆ ಅರ್ಜಿಗಳಿಗೂ ಒಟ್ಟು ಶೇಕಡ ೫ ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.
ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪೈಕಿ ಹೊಸ ಸಂಯೋಜನೆ/ ಭಾಷೆ ಹಾಗೂ ಹೆಚ್ಚುವರಿ ವಿಭಾಗಗಳಿಗೆ ಸಂಬಂದಿಸಿದ ಅರ್ಜಿಗಳನ್ನು ಈ ಹಿಂದೆಎಪ್ರಿಲ್‌ಅಥವಾ ಮೇ ತಿಂಗಳಲ್ಲಿ ಆಹ್ವಾನಿಸಲಾಗುತ್ತಿತ್ತು. ಇದರಿಂದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿತೊಂದರೆ ಉಂಟಾಗುತ್ತಿತ್ತು. ಆದ್ದರಿಂದ ೨೦೨೫-೨೬ನೇ ಸಾಲಿಗೆ ಫೆಬ್ರವರಿ ತಿಂಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಮೇಲಿನ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಕುಪ್ಮ ಕರ್ನಾಟಕವು ಬೇರೆ ಬೇರೆ ಸಂದರ್ಭಗಳಲ್ಲಿ ಮಾನ್ಯ ಸಚಿವರಲ್ಲಿ ಮನವಿ ಮಾಡಿರುವ ವಿಷಯಗಳಿಗೆ ಇಲಾಖೆಯು ಸಕಾರಾತ್ಮಕ ಸ್ಪಂದನೆಯನ್ನು ಕೊಟ್ಟಿದ್ದು, ಈ ವಿಷಯವನ್ನು ಸಭೆಯ ಗಮನಕ್ಕೆ ಇಲಾಖೆಯ ನಿರ್ದೇಶಕ ಭರತ್ ಮತ್ತು ಜಂಟಿ ನಿರ್ದೇಶಕ ಹರ್ಷವರ್ಧನ್ ತಂದಿರುತ್ತಾರೆ.
ಈ ನಿಯೋಗದ ನೇತೃತ್ವವನ್ನು ಕುಪ್ಮರಾಜ್ಯ ಕಾರ್ಯದರ್ಶಿ ಪ್ರೊ.ನರೇಂದ್ರಎಲ್ ನಾಯಕ್, ರಾಜ್ಯ ಉಪಾಧ್ಯಕ್ಷ ಯುವರಾಜ್‌ಜೈನ್, ರಾಜ್ಯ ಕೋಶಾಧಿಕಾರಿ ರಮೇಶ್.ಕೆ, ಬೆಂಗಳೂರು ಉತ್ತರಜಿಲ್ಲಾಧ್ಯಕ್ಷರಾದ ಕೀರ್ತನ್, ಬೆಂಗಳೂರು ಉತ್ತರಜಿಲ್ಲಾ ಕಾರ್ಯದರ್ಶಿ ಡಾ.ದೇವರಾಜ್ ವಹಿಸಿದ್ದರು.



