Tuesday, February 24, 2026
Google search engine

Homeರಾಜ್ಯಸುದ್ದಿಜಾಲಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸದಿದ್ದರೆ ಪಾದಯಾತ್ರೆ..!

ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸದಿದ್ದರೆ ಪಾದಯಾತ್ರೆ..!

ಕೆ ಆರ್ ನಗರ : ಈ ಭಾಗದ ರೈತರ ಜೀವನಾಡಿಯಾಗಿರುವ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಮೀನಾ ಮೇಷ ಮಾಡುತ್ತಿದ್ದು, ಈ ಕೊಡಲೇ ಸರ್ಕಾರ ಎಚ್ಚತೆಕೊಂಡು ಕ್ರಮ ವಹಿಸಬೇಕು ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆವರಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು(ಪಾದಯಾತ್ರೆ) ಹಮ್ಮಿಕೊಳ್ಳಲಾವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ರೈತಪರ್ವ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ.ಅರುಣ್ ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಸಂಘಕ್ಕೆ ಹಸಿರು ಸೇನೆ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ನಾಗೇಶ್ ರವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ರೈತರು ಸೇರ್ಪಡೆಗೊಂಡರು.

ಮುಂದುವರೆದು, ಹಸಿರು ಸೇನೆ ಸಂಘದ 50ಕ್ಕೂ ಹೆಚ್ಚು ಸದಸ್ಯರು ನಮ್ಮ ರೈತ ಪರ್ವ ಸಂಘಕ್ಕೆ ಸೇರಿರುವುದು ಬಹಳ ಸಂತೋಷವಾಗಿದ್ದು, ನಮ್ಮ ಸಂಘವು ರಾಜ್ಯದಲ್ಲಿ 23 ಜಿಲ್ಲೆಗಳಲ್ಲಿ ನಮ್ಮ ಸಂಘ ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಎಲ್ಲಾ ತಾಲೂಕಿನಲ್ಲೂ ಸಂಘದ ಘಟಕವನ್ನು ಪ್ರಾರಂಭಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಪರ್ವ ಸಂಘದ ರಾಜ್ಯ ಗೌರವಾಧ್ಯಕ್ಷ ಜೆ.ಎಂ.ಕುಮಾರ್, ರಾಜ್ಯ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ಶುಕೂರ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ತಾರಾ ಕುಮಾರ್, ರಾಜ್ಯ ಕಾರ್ಯದರ್ಶಿ ಸಾಯಿ ಚಾಮರಾಜ, ಸಂಘಟನಾ ಕಾರ್ಯದರ್ಶಿ ಜಯರಾಮೇಗೌಡ, ಸಹಕಾರ್ಯದರ್ಶಿ ರಾಜಣ್ಣ, ರಾಜ್ಯ ಸಂಚಾಲಕ ಮೀಸೆ ಮಂಜಣ್ಣ, ಕೆ.ಆರ್.!ನಗರ ತಾಲೂಕು ಅಧ್ಯಕ್ಷ ಕೆ.ಎಸ್.ರಾಘವೇಂದ್ರ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಜಿ.ಬಿ. ಮಂಜುನಾಥ್ ಮಹಿಳಾ ಘಟಕದ ಅಧ್ಯಕ್ಷೇ ರೇಣುಕಾಮುಕುಂದ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular