Monday, July 13, 2026
Google search engine

Homeರಾಜ್ಯಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಮುಂದಾದ ಮಂಗಳೂರು‌ ಮಹಾನಗರ ಪಾಲಿಕೆ ಕ್ರಮ ವಿರೋಧಿಸಿ AICCTU ಪ್ರತಿಭಟನೆ

ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಮುಂದಾದ ಮಂಗಳೂರು‌ ಮಹಾನಗರ ಪಾಲಿಕೆ ಕ್ರಮ ವಿರೋಧಿಸಿ AICCTU ಪ್ರತಿಭಟನೆ

ಮಂಗಳೂರಿನ ಪುರಭವನದ ಮುಂದೆ ಸಂಡೇ ಬಜಾರ್ ಬೀದಿಬದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಕರ್ನಾಟಕ ರಾಜ್ಯ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ AICCTU ಹಾಗೂ ಇತರ ಬೀದಿ ಬದಿ ವ್ಯಾಪಾರ ಸಂಘದ ನೇತೃತ್ವದಲ್ಲಿ ತೆರವುಗೊಳಿಸುವುದನ್ನು ತಡೆಹಿಡಿದು ಮಹಾನಗರ ಪಾಲಿಕೆ ಆಯುಕ್ತರ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ವಾಗ್ವಾದ ನಡೆದು ಕೆಲ ಮುಖಂಡರನ್ನು ಬಂಧಿಸಲಾಯಿತು. ವಾಗ್ವಾದ ನಡೆದ ನಂತರ ಎಂದಿನಂತೆ ವ್ಯಾಪಾರ ಮುಂದುವರೆಯಿತು.
ಈ ಹೋರಾಟದಲ್ಲಿ AICCTU ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಕೆಇ ಮೋಹನ್, ಪ್ರಗತಿಪರ ಆಟೋ ಚಾಲಕರ ಸಂಘದ Aicctu ಜಿಲ್ಲಾ ಅಧ್ಯಕ್ಷ ಮಹಮ್ಮದ್ ಅನ್ಸಾರ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಮುಖಂಡರಾದ ಮಹಮ್ಮದ್ ಮುಸ್ತಫಾ, ನೌಷಾದ್ ಉಳ್ಳಾಲ, ರೆಹಮಾನ್ ಸೇರಿದಂತೆ ಹಲವು ಮುಖಂಡರುಗಳು ನೇತೃತ್ವ ವಹಿಸಿದ್ದರು.
ಪ್ರತಿಭಟನೆ ವೇಳೆ ಪೊಲೀಸರು ಮಹಮ್ಮದ್ ಅನ್ಸಾರ್ ಬಜಾಲ್ ಅವರನ್ನು ಬಂಧಿಸಿದ್ದನ್ನು AICCTU ಖಂಡಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ ಪೊಲೀಸರು ಮಹಮ್ಮದ್ ಅನ್ಸಾರ್ ಬಜಾಲ್ ರನ್ನು ಬಿಡುಗಡೆಗೊಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಈ ವಿರೋಧಿ ನಡೆಯನ್ನು AICCTU ತೀವ್ರವಾಗಿ ಖಂಡಿಸಿದ್ದು ಮುಂದೆ ಈ ರೀತಿ ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಂಗಡಿಗೊಳಿಸಲು ಮುಂದಾದರೆ ತೀವ್ರ ಹೋರಾಟವನ್ನು ನಡೆಸುವುದಾಗಿ AICCTU ಎಚ್ಚರಿಕೆ ನೀಡಿದೆ.

RELATED ARTICLES
- Advertisment -
Google search engine

Most Popular