Tuesday, May 19, 2026
Google search engine

Homeಸ್ಥಳೀಯಅರ್ಹರಿಗೆ ಗ್ಯಾರಂಟಿ ತಲುಪಿಸಿ : ಪುಷ್ಪವಲ್ಲಿ ತಾಕೀತು

ಅರ್ಹರಿಗೆ ಗ್ಯಾರಂಟಿ ತಲುಪಿಸಿ : ಪುಷ್ಪವಲ್ಲಿ ತಾಕೀತು

ಮೈಸೂರು : ಅರ್ಹರಿಗೂ ಗ್ಯಾರಂಟಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಆಹಾರ ಇಲಾಖೆ ಹಾಗೂ ನ್ಯಾಯಬೆಲೆ ಅಂಗಡಿ ವರ್ತಕರು ಜಂಟಿ ಕಾರ್ಯನಿರ್ವಹಿಸಿ ಎಂದು ಮೈಸೂರು ನಗರ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷೆ ಪುಷ್ಪವಲ್ಲಿ ತಾಕೀತು ಮಾಡಿದರು.

ನಗರಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಅರ್ಹರಿಗೆ ಸಾಲ ಇತ್ಯಾದಿಗಳಿಗಾಗಿ ಜಿಎಸ್‌ ಟಿ ಮಾಡಿದ್ದಾರೆ. ಅಲ್ಲದೆ ವೈಯಕ್ತಿಕ ಕಾರಣಕ್ಕೆ ಸಾಲ ಪಡೆದಿದ್ದು ಅಂತಹವರಿಗೂ ಸಹ ಗ್ಯಾರಂಟಿಯಿಂದ ಕೈ ಬಿಡಲಾಗಿದೆ. ಅಂತಹ ಅರ್ಹರನ್ನು ಗುರುತಿಸಿ ಗ್ಯಾರಂಟಿ ಸೌಲಭ್ಯ ನೀಡುವಂತೆ ಹೇಳಿದರು.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಾಕೇಶ್‌ ಮಾತನಾಡಿ, ಕಾಳಸಂತೆಯಲ್ಲಿ ಪಡಿತರ ಮಾರಾಟ ಆಗುತ್ತಿರುವ ಪ್ರಕರಣಗಳು ಕಾಣಿಸುತ್ತಿವೆ. ಅಂತಹವರನ್ನು ಪತ್ತೆ ಹಚ್ಚಿ ತಡೆಯಬೇಕು. ಜತೆಗೆ ಫಲಾನುಭವಿಗಳು ಯಾವ ಕಾರಣಕ್ಕೆ ಪಡಿತರವನ್ನು ಮಾರಾಟ ಮಾಡುತ್ತಿದ್ದಾರೆಂಬ ಅಭಿಪ್ರಾಯ ಸಂಗ್ರಹಿಸಿ ಸಮಸ್ಯೆ ಮೂಲ ಇತ್ಯರ್ಥಕ್ಕೆ ಅಧಿಕಾರಿಗಳು ಮುಂದಾಗಬೇಕೆಂದು ತಿಳಿಸಿದರು.

ಸರ್ಕಾರ ಘೋಷಿಸಿರುವ ಆಹಾರದ ಕಿಟ್‌ಗಳನ್ನು ನರಸಿಂಹರಾಜ ಕ್ಷೇತ್ರದಿಂದಲೇ ಅಭಿಯಾನ ಮೂಲಕ ನೀಡಲು ಕಾರ್ಯಕ್ರಮ ರೂಪಿಸುವ ನಿರ್ಣಯ ಕೈಗೊಳ್ಳಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ನರಸಿಂಹರಾಜ ವಿಧಾನಸಭಾ ಕ್ಷೇತ್ರ ವತಿಯಿಂದ ನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಹಮ್ಮಿಕೊಳಲಾಗಿದ ಆಹಾರ ಇಲಾಖೆ ಹಾಗೂ ನ್ಯಾಯಬೆಲೆ ಅಂಗಡಿ ವರ್ತಕರ ಸಭೆಯನ್ನು ನಡೆಸಲಾಯಿತು.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್.ಮಹದೇವ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ್, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಾಕೇಶ್, ಸುರೇಂದ್ರ, ಶಶಿ ಕುಮಾರ್, ರೇಷ್ಮಾ, ಅಹ್ಮದ್ ಸಲೀಮ್, ಮೊಹಮದ್ ಸಾದಾಬ್, ವಿಜಯಲಕ್ಷ್ಮಿ, ಸದಸ್ಯ ಕಾರ್ಯದರ್ಶಿ ಲೋಕೇಶ್ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular