Sunday, April 19, 2026
Google search engine

Homeರಾಜ್ಯಸುದ್ದಿಜಾಲಡಾ. ಎಸ್ ಆರ್ ರಾಮಸ್ವಾಮಿ ರಾಷ್ಟ್ರೀಯ ಮೌಲ್ಯಗಳನ್ನು ಸಾರಿದ ಮಹಾನ್ ವಿದ್ವಾಂಸ- ಸುರೇಶ್ ಎನ್ ಋಗ್ವೇದಿ

ಡಾ. ಎಸ್ ಆರ್ ರಾಮಸ್ವಾಮಿ ರಾಷ್ಟ್ರೀಯ ಮೌಲ್ಯಗಳನ್ನು ಸಾರಿದ ಮಹಾನ್ ವಿದ್ವಾಂಸ- ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ನಾಡಿನ ಹಿರಿಯ ವಿದ್ವಾಂಸರು,ಸಾಹಿತಿ ಚಿಂತಕರಾಗಿದ್ದ ಡಾ. ಎಸ್ ಆರ್ ರಾಮಸ್ವಾಮಿ ರವರು ರಾಷ್ಟ್ರೀಯ ಮೌಲ್ಯಗಳನ್ನು ಹಾಗೂ ಶ್ರೇಷ್ಠ ವ್ಯಕ್ತಿತ್ವ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಬಗ್ಗೆ ಅಪಾರ ಸಾಹಿತ್ಯ ರಚನೆಯನ್ನು ರಚಿಸಿದ ಮಹಾಮೇದಾವಿಗಳಾಗಿದ್ದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಾಮರಾಜನಗರ ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಿದ್ವತ್ತಿನ ಮೇರು ಪ್ರತಿಭೆ ಡಾ. ಎಸ್ ಆರ್ ರಾಮಸ್ವಾಮಿ ರವರ ಸ್ಮರಣೆ ಹಾಗೂ ಕೊಡುಗೆಗಳ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಿಸಿ ಮಾತನಾಡುತ್ತ ರಾಮಸ್ವಾಮಿಯವರು ಸುಮಾರು 55 ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಅವರ ಸುಭಾಷ್ ಚಂದ್ರ ಬೋಸ್ ರವರ ಸಮಗ್ರ ಜೀವನ ಚರಿತ್ರೆ ಯ ಕೋಲ್ಮಿಂಚು, ಜಯಪ್ರಕಾಶ್ ನಾರಾಯಣ್, ವಲ್ಲಭಬಾಯಿ ಪಟೇಲ್,ವಿಶ್ವೇಶ್ವರಯ್ಯ ಭಾರತದಲ್ಲಿ ಸಮಾಜ ಕಾರ್ಯ, ಸ್ವಾತಂತ್ರ್ಯೋಧಯದ ಮೈಲಿಗಲ್ಲುಗಳು, ಆರ್ಥಿಕತೆಯ ಎರಡು ಧ್ರುವ,ಶತಮಾನದ ತಿರುವಿನಲ್ಲಿ,ಭಾರತ ಇತಿಹಾಸ ಪರ್ವಗಳು ಸೇರಿ 12ಕು ಹೆಚ್ಚು ಧೀಮಂತ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಚಿಸುವ ಮೂಲಕ ಭಾರತೀಯ ಯುವಕರಿಗೆ ಶ್ರೇಷ್ಠ ಸಾಧಕರ ಜೀವನ ಮೌಲ್ಯಗಳನ್ನು ತಮ್ಮ ಸಾಹಿತ್ಯ ರಚನೆಯ ಮೂಲಕ ನೀಡಿದವರು. ಆರು ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ, ಕ್ಷೇತ್ರದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದ ರಾಮಸ್ವಾಮಿಯವರು ಸುಧಾ ವಾರಪತ್ರಿಕೆಯಲ್ಲಿ ಉಪ ಸಂಪಾದಕರಾಗಿ, ನಂತರ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಸಾವಿರಾರು ಲೇಖನಗಳನ್ನು ರಚಿಸಿದವರು. ಡಿವಿಜಿಯವರ ಆಪ್ತರಾಗಿದ್ದ ರಾಮಸ್ವಾಮಿ ರವರ 11 ಸಂಪುಟಗಳ ಸಂಕಲನ ಕಾರ್ಯದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ರಾಮಸ್ವಾಮಿಯವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ತಮ್ಮ ಪ್ರಭುದ್ಧ ಚಿಂತನೆಯ ಮೂಲಕ ಜಗತ್ಪ್ರಸಿದ್ಧರಾದವರು. ತಮ್ಮ ಜನಪರ ಆರ್ಥಿಕ, ಸಾಮಾಜಿಕ ಪರಿಸರ,ಅರಣ್ಯ, ಬುಡಕಟ್ಟು ಜನರ ಉನ್ನತಿ ಮತ್ತು ನಾಗರಿಕ ಹಕ್ಕುಗಳ ಸಬಲೀಕರಣಕ್ಕಾಗಿ ಶ್ರಮಿಸಿದ ಮಹಾ ಚೇತನ. ನೂರಾರು ಪ್ರಶಸ್ತಿಗಳ ಶಕ್ತಿಯಾಗಿದ್ದ ರಾಮಸ್ವಾಮಿಯವರು ಭಾರತೀಯ ಯುವಕರಿಗೆ ಆದರ್ಶ ಪ್ರಾಯರಾದವರು ಎಂದು ಋಗ್ವೇದಿ ತಿಳಿಸಿದರು.

ಯುವಕರು ಮತ್ತು ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆ ಜೀವ ಸದಸ್ಯರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಕ್ರೀಡಾಪಟು ಶ್ರೀನಿವಾಸ್ ಪ್ರಸಾದ್ ರವರು ಯುವಕರಲ್ಲಿ ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ ಜಲ ಭಾಷೆಗಾಗಿ ಸಮರ್ಪಿತವಾದ ಸಂಸ್ಥೆ. ಪ್ರತಿಯೊಬ್ಬರೂ ಸದಸ್ಯತ್ವವನ್ನು ಪಡೆದು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಲವನ್ನು ತರಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಗದೀಶನ್, ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ಗುಡ್ ಹ್ಯಾಬಿಟ್ಸ್ ಫೌಂಡೇಶನ್ ಮನೋಜ್, ವರ್ತಕರಾದ ಶ್ರೀನಿವಾಸ್, ಯೂಥ್ ಫಾರ್ ಸೇವಾ ಸಂಸ್ಥೆಯ ಯುವಕರು ವಿದ್ಯಾರ್ಥಿಗಳು ಹಾಜರಿದ್ದು ಡಾ. ಎಸ್ ಆರ್ ರಾಮಸ್ವಾಮಿ ರವರಿಗೆ ಶಾಂತಿ ಕೋರಿ ಸ್ಮರಿಸಲಾಯಿತು.

RELATED ARTICLES
- Advertisment -
Google search engine

Most Popular