ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ರಸಗೊಬ್ಬರಗಳನ್ನು ಸರ್ಕಾರ ನಿಗದಿಪಡಿಸಿರುವ ಎಂ.ಆರ್.ಪಿ ಗಿಂತ ಹೆಚ್ಚಿನ ಬೆಲೆಗೆ ಟ್ರೇಡರ್ಸ್ ನವರು ಮಾರಾಟ ಮಾಡುತ್ತಿದ್ದಾರೆ ಎಂದು ಯುವ ರೈತ ಮುಖಂಡ ಲಕ್ಷ್ಮೀಪುರ ಪ್ರಮೋದ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಡಿಎಪಿ, ಪೋಟಾಷ್,, 20:20:0:13, ಯೂರಿಯಾ, ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದ ರೈತರಿಗೆ ರಸಗೊಬ್ಬರ ಖಾಲಿಯಾಗಿದೆ ಎಂದು ಸಬೂಬು ಹೇಳಿ ಕಳುಹಿಸಲಾಗುತ್ತಿದೆ ಎಂದು ರಸಗೊಬ್ಬರ ಅಂಗಡಿಗಳ ವಿರುದ್ದ ಗುಡುಗಿದ್ದಾರೆ.
ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಈ ನಡುವೆ ದುಪ್ಪಟ್ಟು ಹಣ ನೀಡಿ ರಸಗೊಬ್ಬರ ಖರೀದಿ ಮಾಡುವ ಸ್ಥಿತಿ ಬಂದಿದೆ ಎಂದರೆ ತಾಲೂಕು ಆಡಳಿತದ ವ್ಯವಸ್ಥೆ ಕುಸಿದಿದೆಯ ಎಂದು ಪ್ರಶ್ನೆ ಮಾಡಿದ್ದಾರೆ.
ರಸಗೊಬ್ಬರ ಖರೀದಿಸಲು ಅಂಗಡಿಗಳಿಗೆ ರೈತರು ಹೋದ ಸಂದರ್ಭದಲ್ಲಿ ದರಪಟ್ಟಿ ಪ್ರದರ್ಶನ ಮತ್ತು ಬಿಲ್ ನೀಡುವ ವಿಚಾರದಲ್ಲಿಯೂ ಪ್ರಶ್ನೆ ಮಾಡಿದರೆ ಗೊಬ್ಬರದ ಅಗಂಡಿ ಮಾಲೀಕರಿಂದ ನಿಂದಿಸಲಾಗುತ್ತಿದೆ, ಇಂತಹ ರಸಗೊಬ್ಬರ ಅಂಗಡಿಗಳ ವಿರುದ್ದ ಸೂಕ ಕ್ರಮ ವಹಿಸಿ ರಸಗೊಬ್ಬರ ಅಂಗಡಿಗಳ ಟ್ರೇಡ್ ಪರವಾನಿಗೆ ರದ್ದು ಪಡಿಸಿ ಎಂದು ಒತ್ತಾಯ ಮಾಡಿದ್ದಾರೆ.
ಆವಳಿ ತಾಲೂಕಿನಲ್ಲಿ ಇಷ್ಟೊಂದು ರಸಗೊಬ್ಬರದ ಸಮಸ್ಯೆ ಇದ್ದರೂ ಸಂಬಂದಪಟ್ಟ ಅಧಿಕಾರಿಗಳು ಕಣ್ಣು ಕಾಣದಂತೆ ಕುಳಿತಿದ್ದಾರೆ, ಇವಾಗ ಮುಂಗಾರು ಪ್ರವೇಶ ಆಗಿದೆ ರೈತರು ಜಮೀನಿನಲ್ಲಿ ಭಿತ್ತನೆ ಕಾರ್ಯ ಆರಂಭಿಸಿದ್ದಾರೆ, ಹಾಗಾಗಿ ರಸಗೊಬ್ಬರದ ಅವಶ್ಯಕತೆ ಇದೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕೊಳ್ಳ ಬೇಕಿದೆ ಎಂದು ತಿಳಿಸಿದ್ದಾರೆ.



