Thursday, April 30, 2026
Google search engine

Homeಸ್ಥಳೀಯಬಿಳಿಗಿರಿರಂಗನ ಬೆಟ್ಟದಲ್ಲಿ ಭಾರೀ ಮಳೆ: ಅರಣ್ಯ ತಂಪು

ಬಿಳಿಗಿರಿರಂಗನ ಬೆಟ್ಟದಲ್ಲಿ ಭಾರೀ ಮಳೆ: ಅರಣ್ಯ ತಂಪು

ಚಾಮರಾಜನಗರ : ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ಬುಧವಾರ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದ ಪರಿಣಾಮ, ಸಂಪೂರ್ಣ ಅರಣ್ಯ ಪ್ರದೇಶ ತಂಪಾಗಿದ್ದು ಪ್ರಕೃತಿ ಸೊಬಗು ಹೆಚ್ಚಾಗಿದೆ.

ಇತ್ತೀಚಿನ ಬಿಸಿಲಿನ ತಾಪದಿಂದ ಬಳಲುತ್ತಿದ್ದ ಪ್ರದೇಶಕ್ಕೆ ಈ ಮಳೆ ತಂಪೆರದಂತಾಗಿ, ಅರಣ್ಯದ ಸಸ್ಯಸಂಪತ್ತು ಚೈತನ್ಯಗೊಂಡಿದೆ. ಮಳೆಯ ಪರಿಣಾಮವಾಗಿ ಬೆಟ್ಟ ಪ್ರದೇಶದಲ್ಲಿ ಹಸಿರುಮಯ ವಾತಾವರಣ ಕಂಡುಬಂದಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಮಳೆ ಸುರಿದ ಪರಿಣಾಮ ಕೆಲವೆಡೆ ಸಣ್ಣ ಮಟ್ಟಿನ ನೀರು ಹರಿವು ಕಾಣಿಸಿಕೊಂಡರೂ ಯಾವುದೇ ಅನಾಹುತಗಳ ಬಗ್ಗೆ ವರದಿಯಾಗಿಲ್ಲ.

RELATED ARTICLES
- Advertisment -
Google search engine

Most Popular