ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕ ಹೈನುಗಾರರ ಜೀವನೋಪಾಯ ರಕ್ಷಿಸುವುದು ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಜಾನುವಾರುಗಳ ಮೇವು ಮತ್ತು ಹಿಂಡಿ ದರ ಏರಿಕೆ, ಇಂಧನ ಹಾಗೂ ಪ್ಯಾಕೇಜಿಂಗ್ ವೆಚ್ಚ ಹೆಚ್ಚಳ ಮತ್ತು ಬರಗಾಲದ ಪರಿಣಾಮವಾಗಿ ಹಾಲಿನ ಸಂಗ್ರಹಣೆಯಲ್ಲಿ ಕುಸಿತ ಉಂಟಾಗಿರುವುದು ದರ ಪರಿಷ್ಕರಣೆಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದಾರೆ.ಹಾಲಿನ ದರ ಹೆಚ್ಚಳದ 8 ರೂಪಾಯಿಗಳಲ್ಲಿ 7 ರೂಪಾಯಿ ನೇರವಾಗಿ ರೈತರಿಗೆ ತಲುಪಲಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 35 ರೂಪಾಯಿ ಪಡೆಯುತ್ತಿದ್ದ ರೈತರಿಗೆ ಇದೀಗ 42 ರೂಪಾಯಿ ಸಿಗಲಿದೆ. ಸರ್ಕಾರದ 5 ರೂಪಾಯಿ ಪ್ರೋತ್ಸಾಹಧನ ಸೇರಿ ಒಟ್ಟು 47 ರೂಪಾಯಿ ದೊರೆಯಲಿದೆ.ದಿನಕ್ಕೆ 10 ಲೀಟರ್ ಹಾಲು ಪೂರೈಸುವ ರೈತರಿಗೆ ತಿಂಗಳಿಗೆ ಸುಮಾರು 2,100 ರೂಪಾಯಿ ಹೆಚ್ಚುವರಿ ಆದಾಯ ಸಿಗಲಿದೆ. ಈ ಪರಿಷ್ಕರಣೆಯಿಂದ ರಾಜ್ಯದ ಹೈನುಗಾರರಿಗೆ ವಾರ್ಷಿಕ 1,850ರಿಂದ 2,100 ಕೋಟಿ ರೂಪಾಯಿವರೆಗೆ ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ.ರಾಜ್ಯದಲ್ಲಿ 28.84 ಲಕ್ಷ ಹೈನುಗಾರರಿದ್ದು, ಕೆಎಂಎಫ್ ಸದಸ್ಯರಲ್ಲಿ ಶೇ.67ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ರೈತರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ನೀಡುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ತಿಳಿಸಿದ್ದಾರೆ.ಇನ್ನು ದರ ಏರಿಕೆಯ ಬಳಿಕವೂ ನಂದಿನಿ ಟೋನ್ಡ್ ಹಾಲಿನ ದರ 54 ರೂಪಾಯಿ ಹಾಗೂ ಶುಭಂ ಹಾಲಿನ ದರ 60 ರೂಪಾಯಿ ಇದ್ದು, ಇತರೆ ರಾಜ್ಯಗಳ ಪ್ರಮುಖ ಡೈರಿ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಕಡಿಮೆಯಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.