ಬೆಂಗಳೂರು: ಇಂದಿನಿಂದ ಅಂದರೆ ಮೇ 1 ರಿಂದ ಅಡುಗೆ ಅನಿಲ ನಿಯಮದಲ್ಲಿ ಭಾರಿ ಬದಲಾವವಣೆಯಾಗುತ್ತದೆ. ಇನ್ನೂ ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾಹಿತಿ ನೀಡಿದ್ದ ಸಾರ್ವಜನಿಕರು ಗಮನದಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದೆ.
ಸಚಿವಾಲಯ ನೀಡಿದ ಮಾಹಿತಿಯಂತೆ, ಇಂದಿನಿಂದ ಆಗಲಿರುವ ಪ್ರಮುಖ ಬದಲಾವಾನೆಯನ್ನ ನೋಡುವುದಾದರೆ,
ಪಶ್ಚಿಮ ಏಷ್ಯಾದಲ್ಲಿನ ಯುದ್ದದ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗುತ್ತಿದ್ದು, ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಇಂದಿನಿಂದ ಜಾರಿಗೆ ಬರುವಂತೆ ಒಟ್ಟು ₹993 ರಷ್ಟು ಭಾರಿ ಬೆಲೆ ಏರಿಕೆ ಕಂಡಿದೆ.
ಹಂತ ಹಂತವಾಗಿ ಬೆಲೆ ಏರಿಕೆ: ಮಾರ್ಚ್‌ನಲ್ಲಿ ₹31 ವರೆಗೆ, ಏಪ್ರಿಲ್‌ನಲ್ಲಿ ಮೆಟ್ರೋ ನಗರಗಳಲ್ಲಿ ₹218 ರವರೆಗೆ ಹೆಚ್ಚಳ ಕಂಡಿದ್ದ ಬೆಲೆ ಈಗ ಸಾವಿರದ ಗಡಿ ಸಮೀಪಿಸಿದೆ.
ಎಲ್‌ಪಿಜಿ ಮತ್ತು ಪಿಎನ್‌ಜಿ ಒಟ್ಟಿಗೆ ಹೊಂದುವಂತಿಲ್ಲ.
ಸಬ್ಸಿಡಿ ಸೌಲಭ್ಯವನ್ನು ಅರ್ಹರಿಗೆ ತಲುಪಿಸಲು ಸರ್ಕಾರ ಈಗ ಡ್ಯುಯಲ್ ಕನೆಕ್ಷನ್ ನಿಷೇಧಿಸಿದೆ.
ಸಂಪರ್ಕ ಕಡಿತ: ಪೈಪ್ಡ್ ಗ್ಯಾಸ್ (PNG) ಹೊಂದಿರುವ ಮನೆಗಳಲ್ಲಿ ಇನ್ನು ಮುಂದೆ ಎಲ್‌ಪಿಜಿ ಸಿಲಿಂಡರ್ ಇಟ್ಟುಕೊಳ್ಳುವಂತಿಲ್ಲ.ಒಂದು ವೇಳೆ ಇಟ್ಟುಕೊಂಡರೆ ಅಂತಹ ಗ್ರಾಹಕರು ಕೂಡಲೇ ತಮ್ಮ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಮರಳಿಸಬೇಕು. ಅವರಿಗೆ ಇಂದಿನಿಂದ ರಿಫಿಲ್ ಅಥವಾ ಹೊಸ ಕನೆಕ್ಷನ್ ಸಿಗುವುದಿಲ್ಲ.
ಗಮನಾರ್ಹ ಅಂಶ: ಈಗಾಗಲೇ ದೇಶಾದ್ಯಂತ 43,000ಕ್ಕೂ ಹೆಚ್ಚು ಮಂದಿ ತಮ್ಮ ಎಲ್‌ಪಿಜಿ ಸಂಪರ್ಕವನ್ನು ಹಿಂದಿರುಗಿಸಿದ್ದಾರೆ.
ಇಂಡೇನ್, ಭಾರತ್ ಗ್ಯಾಸ್ ಹಾಗೂ ಹೆಚ್‌ಪಿ ಗ್ಯಾಸ್ ಗ್ರಾಹಕರು ಈ ಕೆಳಗಿನ ಬದಲಾವಣೆಗಳನ್ನು ಗಮನಿಸಬೇಕು:
ಸಿಲಿಂಡರ್ ನಿಮ್ಮ ಮನೆ ಬಾಗಿಲಿಗೆ ಬಂದಾಗ ಮೊಬೈಲ್‌ಗೆ ಬರುವ ಒಟಿಪಿ ನೀಡಿದರಷ್ಟೇ ವಿತರಣೆ ಸಾಧ್ಯ. ನಗರ ಪ್ರದೇಶಗಳಲ್ಲಿ ಗ್ಯಾಸ್ ಬುಕಿಂಗ್ ಅವಧಿಯನ್ನು 25 ದಿನಗಳಿಗೆ ಮತ್ತು ಗ್ರಾಮೀಣ ಭಾಗದಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದೆ. ಎಲ್ಲಾ ಗ್ಯಾಸ್ ಗ್ರಾಹಕರು ತಮ್ಮ ಕೆವೈಸಿ (KYC) ಅಪ್‌ಡೇಟ್ ಮಾಡುವುದು ಈಗ ಕಡ್ಡಾಯವಾಗಿದೆ. ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ಏರುಪೇರಾಗುತ್ತಿದ್ದರೂ, ದೇಶೀಯ ಬಳಕೆದಾರರಿಗೆ ಎಲ್‌ಪಿಜಿ ಹಾಗೂ ಪಿಎನ್‌ಜಿ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಸರ್ಕಾರ ಭರವಸೆ ನೀಡಿದೆ.



