Tuesday, May 5, 2026
Google search engine

Homeಕ್ರೀಡೆಮಮತಾ ಪತನ, ಬಿಜೆಪಿ ಐತಿಹಾಸಿಕ ಜಯ : ಮೆಸ್ಸಿ ಭೇಟಿ ಕುರಿತ ಕಾಕತಾಳಿ ಚರ್ಚೆ

ಮಮತಾ ಪತನ, ಬಿಜೆಪಿ ಐತಿಹಾಸಿಕ ಜಯ : ಮೆಸ್ಸಿ ಭೇಟಿ ಕುರಿತ ಕಾಕತಾಳಿ ಚರ್ಚೆ

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷಗಳಿಂದ ಅಕ್ಷರಶಃ ಆಡಳಿತ ನಡೆಸುತ್ತಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅಧಿಪತ್ಯ ಅಥವಾ ಅವರ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ರಾಜಕೀಯ ಬದಲಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಕಾಕತಾಳಿಯ ಚರ್ಚೆ ಆರಂಭವಾಗಿದ್ದು, ಮಮತಾರ ಈ ಅಧಿಪತನಕ್ಕೆ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಕಾರಣ ಎಂದು ನೆಟ್ಟಿಗರು ಹೇಳಿದ್ದಾರೆ.

ಕಳೆದ ವರ್ಷ ಮೆಸ್ಸಿ ಭಾರತ ಪ್ರವಾಸದ ವೇಳೆ ಕೋಲ್ಕತಾಗೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭೇಟಿಯಾಗಿದ್ದು, 2011ರಲ್ಲಿ ಅವರು ಮೊದಲ ಬಾರಿಗೆ ಕೋಲ್ಕತಾಗೆ ಬಂದಾಗ, ಅಂದಿನ ದೀರ್ಘಕಾಲ ಆಡಳಿತ ನಡೆಸಿದ್ದ ಸಿಪಿಎಂ ಸರ್ಕಾರ ಪತನಗೊಂಡು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರಕ್ಕೆ ಬಂದಿತ್ತು. ಇದೀಗ ಅವರ ಎರಡನೇ ಭೇಟಿಯ ನಂತರ ಮತ್ತೆ ಆಡಳಿತ ಬದಲಾವಣೆಯಾಗಿರುವುದು ಕಾಕತಾಳಿಯ ಘಟನೆಯನ್ನು ಹೋಲಿಕೆ ಮಾಡಿ ನೆಟ್ಟಿಗರು ಮಮತಾ ಸೋಲಿಗೆ ಮೆಸ್ಸಿ ಕಾರಣ ಎಂದು ಹೇಳಿದ್ದಾರೆ.

294 ಸ್ಥಾನಗಳ ಪೈಕಿ 293ಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಬಹುಮತ ಪಡೆದು ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ್ದು, ಅಕ್ರಮ ಒಳನುಸುಳುವಿಕೆ, ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ, ಹಾಗೂ ಓಲೈಕೆ ರಾಜಕಾರಣದ ಆರೋಪಗಳು ಟಿಎಂಸಿ ವಿರುದ್ಧ ತೀವ್ರ ಅಸಮಾಧಾನ ಹುಟ್ಟಿಸಿದ್ದವು. ಸತತ 15 ವರ್ಷಗಳ ಆಡಳಿತ ವಿರೋಧಿ ಅಲೆಗೆ ಸಿಕ್ಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡಿದ್ದಾರೆ.

ಇದರ ಜೊತೆಗೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೂಪಿಸಿದ ಚುನಾವಣಾ ಕಾರ್ಯತಂತ್ರ ಮತ್ತು ತಳಮಟ್ಟದ ಕಾರ್ಯಕರ್ತರ ಚಟುವಟಿಕೆಗಳು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ. ಕಳೆದ ಕೆಲವು ತಿಂಗಳಲ್ಲಿ ರಾಜ್ಯದಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸಿ, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ಕೂಡ ಪ್ರಮುಖ ಪಾತ್ರವಹಿಸಿದ್ದು, ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರದಲ್ಲೇ ಅವರಿಗೆ ಸೋಲುಣಿಸಿದ್ದಾರೆ. ಆದರೆ ಅವರ ವಿರುದ್ಧದ ಹಳೆಯ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಆಯ್ಕೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

RELATED ARTICLES
- Advertisment -
Google search engine

Most Popular