ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೆಟ್ಟು ನಿಂತ ಬಸ್ ಗೆ ಹೊಸ ಚಾಲಕನ ನೇಮಕ ಮಾಡಲಾಗಿದೆ. ಹೊಸ ಚಾಲಕ ಬಂದ ಕೂಡಲೇ ಕೆಟ್ಟಿರುವ ಬಸ್ ಸರಿಯಾಗುವುದಿಲ್ಲ. ಗೃಹ ಪ್ರವೇಶದ 2ನೇ ದಿನವೇ ಚಾವಣಿ ಕುಸಿದು ಬಿದ್ದಿದೆ ಎಂದು ಲೇವಡಿ ಮಾಡಿದರು.
ರಾಮಲಿಂಗರೆಡ್ಡಿ ಬೆಂಗಳೂರು ಅಭಿವೃದ್ದಿ ಖಾತೆ ಕೇಳಿದ್ದು ಅವರ ಇಚ್ಛೆ. ಪರಿಶಿಷ್ಟರಿಗೆ ಸಮಾಜ ಕಲ್ಯಾಣ ಇಲಾಖೆಯಯ್ನ ಖಾತೆಯನ್ನು ಕೊಡಬಾರದು. ಗ್ಯಾರಂಟಿ ಅನುಷ್ಠಾನ ಸಮಿತಿಯೇ ಕಾನೂನು ಬಾಹಿರವಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ 6 ಪತ್ರ ಬರೆದರೂ ಇನ್ನೂ ಅವರಿಗೆ ಸರ್ಕಾರ ಮನೆಯನ್ನೇ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.



