Friday, July 10, 2026
Google search engine

Homeಸ್ಥಳೀಯಅಕ್ಟೋಬರ್ 11ಕ್ಕೆ ಮೈಸೂರು ದಸರಾ ಉದ್ಘಾಟನೆ; 21ರಂದು ಜಂಬೂಸವಾರಿಗೆ ಚಾಲನೆ

ಅಕ್ಟೋಬರ್ 11ಕ್ಕೆ ಮೈಸೂರು ದಸರಾ ಉದ್ಘಾಟನೆ; 21ರಂದು ಜಂಬೂಸವಾರಿಗೆ ಚಾಲನೆ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ.

ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಕ್ಟೋಬರ್‌ 11ರಂದು ಬೆಳಿಗ್ಗೆ 11.50ಕ್ಕೆ ಶುಭ ಧನುರ್ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಸಲು ತೀರ್ಮಾನಿಸಲಾಯಿತು.

ಅಕ್ಟೋಬರ್‌ 21ರಂದು ಸಂಜೆ 4.10ರಿಂದ 4.35ರ ನಡುವೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

RELATED ARTICLES
- Advertisment -
Google search engine

Most Popular