ಬೆಂಗಳೂರು : ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಜಾಗ ನೀಡಿದ್ದಕ್ಕೆ ಆಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್ ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಜಯಮಾಲ, ಚೇತನ್ ಹೇಳಿಕೆಯಿಂದ ಬಹಳ ನೋವು ಆಗಿದೆ. ಚಿತ್ರರಂಗದ ಒಂದು ಭಾಗವಾಗಿರುವ ವ್ಯಕ್ತಿಯಿಂದ ತಲೆತಗ್ಗಿಸುವಂತಾಗಿದೆ. ಈ ರೀತಿ ಹೇಳಿಕೆ ನೀಡಿ ಸಂಸ್ಥೆ ಫ್ಯಾನ್ಸ್ ಗೆ ಮುಜುಗರ ಮಾಡುತ್ತಿದ್ದಾರೆ.
ಚೇತನ್ ದೊಡ್ಡ ತಪ್ಪು ಮಾಡಿದ್ದಾರೆ. ಪಾಕ್ ಜಿಂದಾಬಾದ್ ಎಂದಿರುವ ವ್ಯಕ್ತಿ ನೀವು ಕ್ಷಮೆ ಕೇಳಬೇಕು. ನಟ ಚೇತನ್ ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ ಎಂದು ಜಯಮಾಲ ತಿಳಿಸಿದರು.



