ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ 13 ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕಚೇರಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಸಚಿವರು ಶೀಘ್ರದಲ್ಲೇ ತಮ್ಮ ಇಲಾಖೆಗಳ ಆಡಳಿತ ಕಾರ್ಯಗಳನ್ನು ಹೊಸ ಕಚೇರಿಗಳಿಂದ ಆರಂಭಿಸಲಿದ್ದಾರೆ.
ಈ ಪೈಕಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಾಲ್ಕು ಕೊಠಡಿಗಳನ್ನು ನೀಡಿರುವುದು ವಿಶೇಷ ಗಮನ ಸೆಳೆದಿದೆ. ವಿಧಾನಸೌಧದ 335, 336, 337 ಹಾಗೂ 337A ಕೊಠಡಿಗಳನ್ನು ಅವರಿಗೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ದೊರಕದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಇದೀಗ ಹೆಚ್ಚಿನ ಸೌಲಭ್ಯಗಳಿರುವ ಕಚೇರಿ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನಲಾಗಿದೆ.
ಇದೇ ವೇಳೆ, ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ. ಶಿವಕುಮಾರ್ ಬಳಸುತ್ತಿದ್ದ ಕಚೇರಿಯನ್ನೇ ರಾಮಲಿಂಗಾರೆಡ್ಡಿಗೆ ನೀಡಲಾಗಿದೆ. ಸಿಎಂ ಕಚೇರಿ ಮಾದರಿಯಲ್ಲಿ ನವೀಕರಣಗೊಂಡಿರುವ ಈ ಕಚೇರಿ ಈಗ ಜಲಸಂಪನ್ಮೂಲ ಸಚಿವರ ಕಾರ್ಯಾಲಯವಾಗಲಿದೆ.
ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ವಿಧಾನಸೌಧದ 327 ಹಾಗೂ 327A ಕೊಠಡಿಗಳು ಹಂಚಿಕೆಯಾಗಿದ್ದರೆ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ 340A, 341 ಮತ್ತು 341A ಕೊಠಡಿಗಳನ್ನು ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ 314 ಮತ್ತು 314A, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರಿಗೆ 317 ಹಾಗೂ 317A, ಯುಟಿ ಖಾದರ್, (ಆರೋಗ್ಯ ಸಚಿವ) – ವಿಧಾನಸೌಧ, 315/315A, ಬೈರತಿ ಸುರೇಶ್, (ಸಾರಿಗೆ ಸಚಿವ) – ವಿಧಾನಸೌಧ, 316/316A, ಸತೀಶ್ ಜಾರಕಿಹೊಳಿ, (ಲೋಕೋಪಯೋಗಿ ಸಚಿವ) – ವಿಕಾಸಸೌಧ, 444/445,ಈಶ್ವರ್ ಖಂಡ್ರೆ, (ಗ್ರಾಮೀಣಾಭಿವೃದ್ಧಿ ಸಚಿವ) – ವಿಕಾಸಸೌಧ, 36/37, ಶರಣಪ್ರಕಾಶ್ ಪಾಟೀಲ್, (ವೈದ್ಯಕೀಯ ಶಿಕ್ಷಣ ಸಚಿವ) – ವಿಕಾಸಸೌಧ. 344/345 ಕೊಠಡಿಗಳು ಲಭಿಸಿವೆ. ಈ ಹಂಚಿಕೆ ಸಚಿವರ ಆಡಳಿತ ಕಾರ್ಯಗಳಿಗೆ ವೇಗ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



