Monday, June 8, 2026
Google search engine

Homeರಾಜಕೀಯದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿದ್ದು ಬೇಸರ : ಬಸನಗೌಡ ಪಾಟೀಲ್ ಯತ್ನಾಳ್

ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿದ್ದು ಬೇಸರ : ಬಸನಗೌಡ ಪಾಟೀಲ್ ಯತ್ನಾಳ್

ರಾಮನಗರ :  ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಏಕೆ ಟಿಕೆಟ್ ಕೊಟ್ಟಿಲ್ಲ ಎಂಬುದು ಗೊತ್ತಿಲ್ಲ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ.

ಸುಧಾಮೂರ್ತಿ ಅವರನ್ನ ರಾಜ್ಯಸಭೆಗೆ ಕಳುಹಿಸಿದಂತೆ ನೇರವಾಗಿ ಹಚ್ ಡಿ ದೇವೇಗೌಡರನ್ನ ರಾಜ್ಯಸಭೆಗೆ ಕಳುಹಿಸಿ. ಕರ್ನಾಟದ ಧ್ವನಿಯಾಗಿ ರಾಜ್ಯಸಭೆಗೆ ಕಳುಹಿಸಿ. ಇಳಿವಯಸ್ಸಿನಲ್ಲೂ ನೀರಾವರಿ, ಮೇಕೆದಾಟು ಯೋಜನೆ ಬಗ್ಗೆ ಎಚ್ ಡಿ ದೇವೇಗೌಡರು ಮಾತನಾಡುತ್ತಾರೆ. ಹೀಗಾಗಿ ಹೆಚ್ ಡಿಡಿಗೆ ಪ್ರಧಾನಿ ಮೋದಿ ಅವರು ಅವಕಾಶ ಕೊಡಬೇಕು ಎಂದರು.

RELATED ARTICLES
- Advertisment -
Google search engine

Most Popular