Monday, June 29, 2026
Google search engine

Homeರಾಜಕೀಯಚಾಮುಂಡೇಶ್ವರಿ ಅಭಿವೃದ್ಧಿಯೇ ನನ್ನ ರಾಜಕಾರಣ : ಜಿ.ಟಿ. ದೇವೇಗೌಡ

ಚಾಮುಂಡೇಶ್ವರಿ ಅಭಿವೃದ್ಧಿಯೇ ನನ್ನ ರಾಜಕಾರಣ : ಜಿ.ಟಿ. ದೇವೇಗೌಡ

ಮೈಸೂರು : ತಮ್ಮ ಕುರಿತು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಆಡಿರುವ ಮಾತುಗಳಿಗೆ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ ಕೌಂಟರ್​​ ಕೊಟ್ಟಿದ್ದಾರೆ. ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ.

ಕುಮಾರ ಪರ್ವ ಮಾಡಿದ್ದು ಚಾಮುಂಡೇಶ್ವರಿ ಜನ ಮಾತ್ರ. ಬೇರೆ ಯಾವ ಕ್ಷೇತ್ರದಲ್ಲೂ ಈ ರೀತಿಯ ಸಮಾವೇಶ ಮಾಡಿಲ್ಲ. ನನಗೆ ಫೋನ್ , ಇನ್ಸ್ಟಾಗ್ರಾಂ ನೋಡಲು ಬರಲ್ಲ. ಎಸ್​ಎಂಎಸ್​​​ ನೋಡಲೂ ಬರಲ್ಲ. ಪಿಎಗಳು ಫೋನ್ ಮಾಡಿಕೊಡ್ತಾರೆ. ನಾನು ಟಿವಿ ನೋಡಿಲ್ಲ, ಹೀಗಾಗಿ ಅವರ ಹೇಳಿಕೆಯನ್ನ ಗಮನಿಸಿಲ್ಲ ಎಂದು ಜಿಟಿಡಿ ಹೇಳಿದ್ದಾರೆ. ಕಾಂಗ್ರೆಸ್​​ಗೆ ಸೇರುವ ವದಂತಿಗಳಿಗೂ ಇದೇ ವೇಳೆ ಅವರು ಸ್ಪಷ್ಟನೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular