ಬೆಂಗಳೂರು : ಅಡ್ಡಮತದಾನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್, ರಾಜಕೀಯ ಅಪಚಾರಕ್ಕೆ ಧರ್ಮಸ್ಥಳ ಎಳೆದು ತರಬಾರದು ಎಂದಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಸುರೇಶ್ ಕುಮಾರ್, ಧರ್ಮಸ್ಥಳದಲ್ಲೂ ಅಡ್ಡ ಮತದಾನ ಮಾಡಿಲ್ಲ ಅಂದರೆ ಇದು ಪುಣ್ಯಕ್ಷೇತ್ರದ ಮೇಲೆ ಅಪಚಾರ ಮಾಡಿದಂತಾಗುತ್ತೆ. ಹೀಗಾಗಿ ರಾಜಕೀಯ ಅಪಚಾರಕ್ಕೆ ಧರ್ಮಸ್ಥಳ ಎಳೆದು ತರಬಾರದು ಎಂದರು.
ಇದರಲ್ಲಿ ಧರ್ಮಸ್ಥಳ ತರುವುದು ಸೂಕ್ತವಲ್ಲ ಅನ್ನೋದು ನನ್ನ ಅನಿಸಿಕೆ. ರಾಜಕೀಯ ಅಪಚಾರಕ್ಕೆ ರಾಜಕೀಯ ಉತ್ತರ ಕಂಡುಹಿಡಿಯಬೇಕು ಆತ್ಮಸಾಕ್ಷಿ ಬಿಟ್ಟು ಯಾವುದು ಇರಲು ಸಾಧ್ಯವಿಲ್ಲ. ನಮ್ಮ ಅಭ್ಯರ್ಥಿ ಲಿಗರಾಜು ಪಾಟೀಲ್ ಗೆ 3 ಮತದ ಕೊರತೆ ಬಂತು. ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಬರಬೇಕಾದ ಮತಗಳು ಬಂದಿಲ್ಲ. ಇದರಿಂದ ಎಲ್ಲರಿಗೂ ಸಹಜವಾಗಿ ಬೇಸರವಾಗಿದೆ. ಈ ತಪ್ಪನ್ನು ಕಂಡುಹಿಡಯಲು ಒಂದು ಸಮಿತಿ ರಚಿಸಲಾಗಿದೆ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿಲ್ಲ ಎನ್ನುತ್ತಿದ್ದಾರೆ ಆದರೆ ಅಡ್ಡಮತದಾನ ಆಗಿದೆ. ಪಕ್ಷ ನಿರ್ಧರಿಸಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಹೇಳಿದ್ದಾರೆ ನಾನು ಖಷಿಯಿಂದ ಅಥವಾ ಸೈಕಲ್ ನಲ್ಲಿ ಹೋಗಿ ಮೊದಲು ನಿಂತು ಪ್ರಮಾಣ ಮಾಡಿ ಬರುತ್ತೇನೆ ಅಡ್ಡಮತದಾನ ಮಾಡಿದವರು ಪಕ್ಷದಲ್ಲಿ ಇರಲು ಲಾಯಕ್ಕಿಲ್ಲ ಎಂದರು.



