Tuesday, June 23, 2026
Google search engine

Homeಸ್ಥಳೀಯಕೃಷಿ ವಾಹನಗಳಿಗೆ ಟೋಲ್ : ರೈತರ ಆಕ್ರೋಶ : ಗಣಂಗೂರು ಟೋಲ್‌ನಲ್ಲಿ ರೈತರ ಬೃಹತ್ ಪ್ರತಿಭಟನೆ

ಕೃಷಿ ವಾಹನಗಳಿಗೆ ಟೋಲ್ : ರೈತರ ಆಕ್ರೋಶ : ಗಣಂಗೂರು ಟೋಲ್‌ನಲ್ಲಿ ರೈತರ ಬೃಹತ್ ಪ್ರತಿಭಟನೆ

ಮಂಡ್ಯ :  ಕೃಷಿ ಉತ್ಪನ್ನ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದ ಗಣಂಗೂರು ಟೋಲ್ ಗೇಟ್ ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕಾನೂನು ಬಾಹಿರವಾಗಿ ರೈತರಿಂದ ಟೋಲ್ ಸಂಗ್ರಹ  ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಟೋಲ್ ಗೆ ಆಗಮಿಸಿ ಟೋಲ್ ಸ್ಟಿಕ್ ಮುರಿದು, ಕೃಷಿ ಉತ್ಪನ್ನ ವಾಹನಗಳನ್ನ ಟೋಲ್ ಸಂಗ್ರಹಿಸದೇ ಉಚಿತವಾಗಿ ಬಿಟ್ಟು ಹೆದ್ದಾರಿ ಪ್ರಾಧಿಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಪ್ರಾಧಿಕಾರದ ಅಧಿಕಾರಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಪ್ರತಿಭಟನಾನಿರತ ರೈತರು ಕೂಲಿ ಮಾಡೋಕೆ ನಾವು ಬೇಕು ಅಧಿಕಾರಿಗಳು ಮಾತ್ರ ಬೇರೆ ಭಾಷೆಯವರು ಬೇಕಾ? ಕನ್ನಡ ಬರುವ ಅಧಿಕಾರಿಯನ್ನು ಕರೆಸಿ ಎಂದು ಪಟ್ಟು ಹಿಡಿದರು.

RELATED ARTICLES
- Advertisment -
Google search engine

Most Popular