Sunday, April 19, 2026
Google search engine

Homeರಾಜ್ಯಸುದ್ದಿಜಾಲಬಲಮುರಿ, ಎಡಮುರಿಗೆ ಪ್ರವಾಸಿಗರ ನಿಷೇಧ-ವ್ಯಾಪಾರಿಗಳು ಅಸಮಾಧಾನ

ಬಲಮುರಿ, ಎಡಮುರಿಗೆ ಪ್ರವಾಸಿಗರ ನಿಷೇಧ-ವ್ಯಾಪಾರಿಗಳು ಅಸಮಾಧಾನ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಹಾಗೂ ಎಡಮುರಿ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತಿದ್ದವು. ಅದರಲ್ಲೂ ಈ ಬೇಸಿಗೆಯಲ್ಲಿ ಮತ್ತಷ್ಟು ಪ್ರವಾಸಗರ ದಂಡೇ ಹರಿಯುತ್ತಿತತು. ಆದರೆ ಇದೀಗ ಇಲ್ಲಿ ನಡೆದಿರುವ ಸಾವಿನ ಪರಿಣಾಮ ಪ್ರವಾಸಿಗರಿಗೆ ಬಲಮುರಿ ಹಾಗೂ ಎಡಮುರಿಯ ಎರಡು ಪ್ರವಾಸಿ ತಾಣಗಳಿಗೆ ಪೋಲಿಸರು ನಿಷೇಧ ಹೇರಿದ್ದಾರೆ.

ಇತ್ತಿಚಿಗೆ ಇಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ಕಾವೇರಿ ನದಿಗೆ ಇಳಿದು ಮೋಜು- ಮಸ್ತಿ ಮಾಡುವ ವೇಳೆ ಸುಳಿಗೆ ಸಿಕ್ಕಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಎರಡು ಪ್ರವಾಸಿ ತಾಣಗಳಿಗೆ ಹೋಗುವುದನ್ನ ನಿಷೇಧಿಸಿದ್ದರು.

2015ರಿಂದ ಇಲ್ಲಿಯವರೆಗೆ ಈ ಎಡಮುರಿ ಮತ್ತು ಬಲಮುರಿಯಲ್ಲ 79 ಮಂದಿ ಮೃತಪಟ್ಟಿದ್ದು, ಕಳೆದ ಒಂದು ವಾರದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವು-ನೋವುಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಈ ಎರಡು ಪ್ರವಾಸಿ ತಾಣಗಳಿಗೆ ಮುಂದಿನ ಆದೇಶದವರೆಗೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ.

ಈ ಸ್ಥಳಗಳಲ್ಲಿ ಪ್ರವಾಸಗರ ನಿರ್ಬಂಧ ಇರುವ ಕಾರಣ, ಇಲ್ಲಿರುವ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ಪ್ರವಾಸಿಗರನ್ನೇ ನಂಬಿಕೊಂಡು ಇಲ್ಲಿ ಸಾಕಷ್ಟು ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ ಇದೀಗ ಇವರ ಸ್ಥಿತಿಯೂ ಚಿಂತಾಜನಕವಾಗಿದೆ. ಇಲ್ಲಿ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಿ ಸಾವು-ನೋವುಗಳು ಆಗದಂತೆ ಕ್ರಮ ವಹಿಸಬೇಕಾಗಿತ್ತು, ಆದರೆ ನಿರ್ಬಂಧ ಹೇರಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಲ್ಲಿನ ವ್ಯಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular