Monday, July 6, 2026
Google search engine

Homeಸಿನಿಮಾಆಗಸ್ಟ್ 15ಕ್ಕೆ ಬೆಂಗಳೂರಿನಲ್ಲಿ 'ಟಾಕ್ಸಿಕ್' ಅಬ್ಬರ : ಯಶ್ ಬರ್ತಿದ್ದಾರಾ? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ!

ಆಗಸ್ಟ್ 15ಕ್ಕೆ ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಅಬ್ಬರ : ಯಶ್ ಬರ್ತಿದ್ದಾರಾ? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ!

ಬೆಂಗಳೂರು : ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಗೆ ಎರಡು ತಿಂಗಳಿಗೂ ಕಡಿಮೆ ಸಮಯವಿದ್ದು, ಅಭಿಮಾನಿಗಳ ಕಾತರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ, ಚಿತ್ರತಂಡವು ಆಗಸ್ಟ್ 26ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಭರ್ಜರಿ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಆಗಸ್ಟ್ 15ಕ್ಕೆ ಗ್ರ್ಯಾಂಡ್ ಟ್ರೈಲರ್ ಲಾಂಚ್?

ಕನ್ನಡಿಗರ ಬಹುದಿನದ ಬೇಡಿಕೆಯಂತೆ, ಯಶ್ ಅಂತಿಮವಾಗಿ ತಮ್ಮ ತವರು ನೆಲವಾದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೂಲಗಳ ಪ್ರಕಾರ, ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಭವಾದ ಆ. 15ರಂದು ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಚಿತ್ರದ ಗ್ರ್ಯಾಂಡ್ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭಕ್ಕೆ ಸ್ಥಳ ಮತ್ತು ಸಮಯವನ್ನು ಚಿತ್ರತಂಡ ಶೀಘ್ರವೇ ಅಧಿಕೃತವಾಗಿ ಘೋಷಿಸಲಿದೆ.

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ‘ಟಾಕ್ಸಿಕ್’ ಸದ್ದು

ಕೊಟ್ಟ ಮಾತಿನಂತೆ ಯಶ್ ಅವರು ತಮ್ಮ ಈ ಚಿತ್ರದ ಮೂಲಕ ಬಾಲಿವುಡ್‌ನಿಂದ ಹಿಡಿದು ಹಾಲಿವುಡ್‌ವರೆಗಿನ ಗಣ್ಯರನ್ನು ನಮ್ಮ ಬೆಂಗಳೂರಿಗೆ ಕರೆಸಲಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ಸಿನಿಮಾದ ತಾರಾಗಣದ ಭಾಗವಾಗಿರುವ ಬಾಲಿವುಡ್‌ನ ಮೂವರು ನಟಿಯರು, ಕನ್ನಡ ಹಾಗೂ ತಮಿಳು ಚಿತ್ರರಂಗದ ಪ್ರಮುಖ ಕಲಾವಿದರು ಪಾಲ್ಗೊಳ್ಳುವ ಸಾಧ್ಯತೆಯಿದೆ. ‘ಸಿನಿಮಾಕಾನ್’ ವೇದಿಕೆಯಲ್ಲಿ ಈಗಾಗಲೇ ಚಿತ್ರದ ಗ್ಲಿಂಪ್ಸ್ ಪ್ರದರ್ಶನಗೊಂಡು ಭಾರೀ ಮೆಚ್ಚುಗೆ ಗಳಿಸಿರುವುದರಿಂದ, ಜಾಗತಿಕ ಮಟ್ಟದ ಸಿನಿಪ್ರಿಯರು ಸಹ ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.

ಚಿತ್ರದ ವಿಶೇಷತೆಗಳು

ನಿರ್ದೇಶನ : ಗೀತು ಮೋಹನ್‌ದಾಸ್.

ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ (ಸಹ ನಿರ್ಮಾಣ).

ಕಥೆ : ಯಶ್ ಅವರೇ ಕಥೆಯನ್ನು ಬರೆದಿದ್ದು, ಇದು ಕನ್ನಡದ ‘ಹಾಲಿವುಡ್’ ಮಟ್ಟದ ಸಿನಿಮಾ ಎಂದು ಬಿಂಬಿತವಾಗಿದೆ.

ರನ್ ಟೈಮ್ : ಚಿತ್ರದ ದೀರ್ಘಾವಧಿಯು ಬರೋಬ್ಬರಿ 3 ಗಂಟೆ 15 ನಿಮಿಷಗಳಿರಲಿದೆ ಎಂದು ವರದಿಯಾಗಿದೆ.

‘ಟಾಕ್ಸಿಕ್’ ಚಿತ್ರದ ಟೀಸರ್‌ ಗಳು ಮತ್ತು ‘ಲೇಡಿಸ್ & ಲೇಡಿಸ್’ ಜಬರ್ದಸ್ತ್ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಇದೀಗ ಆಗಸ್ಟ್ 15ರ ಟ್ರೈಲರ್ ಲಾಂಚ್ ಇವೆಂಟ್ ಮೂಲಕ ಯಶ್ ಯಾವ ರೀತಿ ಕನ್ನಡಿಗರನ್ನು ರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular