Monday, June 22, 2026
Google search engine

Homeಅಪರಾಧಉಲ್ಲಾಸ್ ಗೌಡ ಕಿರುಕುಳ ಆರೋಪ : ಒಂದೇ ಕುಟುಂಬದ ಮೂವರು ಸಾವು

ಉಲ್ಲಾಸ್ ಗೌಡ ಕಿರುಕುಳ ಆರೋಪ : ಒಂದೇ ಕುಟುಂಬದ ಮೂವರು ಸಾವು

ಮೈಸೂರು : ಡೆತ್ ನೋಟ್ ಬರೆದಿಟ್ಟು ತಾಯಿ, ತಂದೆ ಹಾಗೂ ಮಗಳು ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಆತ್ಮಹತ್ಯೆಗೆ ಶರಣಾದವರು. ಅದೇ ಗ್ರಾಮದ ಉಲ್ಲಾಸ್ ಗೌಡನ ಕಿರುಕುಳ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ರಕ್ಷಿತಾಗೆ ಮದುವೆ ನಿಶ್ಚಿಯವಾಗಿತ್ತು, ಉಲ್ಲಾಸ್ ಗೌಡನಿಗೆ ರಕ್ಷಿತಾ ಕಳುಹಿಸಿದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಮದುವೆ ನಿಶ್ಚಿಯವಾಗಿದ್ದ ಯುವಕನಿಗೆ ಮೆಸೇಜ್ ಹಾಗೂ ಫೋಟೋಗಳನ್ನು ಉಲ್ಲಾಸ್ ಗೌಡ ಕಳುಹಿಸಿದ್ಧ ಎನ್ನಲಾಗಿದೆ.

ಈ ಬೆಳವಣಿಗೆಯಿಂದ ಬೇಸತ್ತು ಗ್ರಾಮದ ತಮ್ಮ ಮನೆಯಲ್ಲೇ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರ ಸಾವಿಗೂ ಉಲ್ಲಾಸ್ ಗೌಡ‌ನೆ ಕಾರಣನೆಂದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದ್ದು,  ಸ್ಥಳಕ್ಕೆ ವರುಣಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

RELATED ARTICLES
- Advertisment -
Google search engine

Most Popular