ಮೈಸೂರು : ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಇಂದು ದಿನಾಂಕ 23/06/2026 ಮಂಗಳವಾರದಂದು ವಿಶ್ವ ಹಿಂದೂ ಪರಿಷತ್ ನ ಧರ್ಮ ಪ್ರಸಾರ ವಿಭಾಗದ ಮನೆ ಮನೆ ಹನುಮ ಎಂಬ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಾಪುರ ಮಾಹಾಪೀಠಂ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ಮಾರುತಿ ಗುರೂಜಿ ರವರು ಹನುಮನ ಮೂರ್ತಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಚಾಲನೆ ನೀಡಿದರು.
ವಿಶ್ವ ಹಿಂದೂ ಪರಿಷತ್ ನ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆಡೆಯಲಿ ಹಾಗೂ ಪ್ರತಿ ಮನೆಯಲ್ಲೂ ಹನುಮನ ಪೂಜೆಯ ಮೂಲಕ ಸನಾತನ ಧರ್ಮದ ಆಚರಣೆ ಹಾಗೂ ಜಾಗೃತಿ ಮೂಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಹೆಬ್ಬಾರ್ ಮಾತನಾಡಿ ವಿಶ್ವ ಹಿಂದೂ ಪರಿಷತ್ ಹನುಮನ ಪೂಜೆಯನ್ನು ಮೈಸೂರಿನ ಪ್ರತಿ ಮನೆಯಲ್ಲೂ ಯಾವುದೇ ಬೇಧ ಭಾವವಿಲ್ಲದೆ ಎಲ್ಲರೂ ಪೂಜೆ ಮಾಡಬಹುದು ಎಂದು ತಿಳಿಸಿದರು.
ಧರ್ಮ ಪ್ರಸಾರ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಪುನೀತ್ ಜಿ ಮಾತನಾಡಿ ಸನಾತನ ಹಿಂದೂ ಧರ್ಮದ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಗುರುಗಳಿಂದ ಪೂಜಿಸಿ ಇಂದು ಮನೆ ಮನೆ ಕಾರ್ಯಕ್ರಮದ ಹನುಮನ ಮೂರ್ತಿಗೆ ಚಾಲನೆ ನೀಡಿಸಲಾಗಿದೆ. ಹನುಮನ ಪೂಜೆಯನ್ನು ಮನೆಯಲ್ಲಿ ಮಾಡಿಸಲು ಇಚ್ಚಿಸುವವರು ಮೈಸೂರಿನ ವಿಶ್ವ ಹಿಂದೂ ಪರಿಷತ್ ಅನ್ನು ಸಂಪರ್ಕಿಸಬಹುದು ಈ ಪೂಜೆಗೆ ಯಾವುದೇ ತರಹದ ಶುಲ್ಕ ಅಥವಾ ಕಾಣಿಕೆ ಇರುವುದಿಲ್ಲ ಎಂದು ತಿಳಿಸಿದರು. ಪೂಜೆ ಮಾಡಿಸಲು ಇಚ್ಚಿಸುವವರು 8105366574 ಅಥವಾ 9880309898 ಗೆ ಕರೆಮಾಡಿ ಪೂರ್ವ ನೊಂದಣಿ ಮಾಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರಿನ ಬಾಲ ಪ್ರತಿಭೆ ತ್ರಿವಳಿ ವಿಶ್ವ ದಾಖಲೆ ಮಾಡಿರುವ ಪೃಥು ಪಿ ಅದ್ವೈತ್ ವೇದ ಘೋಷಣೆಗಳ ಮೂಲಕ ಶ್ರೀ ಮಾರುತಿ ಗುರೂಜಿ ರವರನ್ನು ಸ್ವಾಗತಿಸಿದರು. ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ. ಆರ್. ಗಣೇಶ್, ಉದ್ಯಮಿ ಮನು, ವಿಶ್ವ ಹಿಂದೂ ಪರಿಷತ್ ನ ನರಸಿಂಹ ಮೂರ್ತಿ, ಜಗದೀಶ್ ಹೆಬ್ಬಾರ್, ಮಂಜುನಾಥ್, ಹುಲಗಾದ್ರಿ, ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ನಿರ್ದೇಶಕಿ ಶ್ರೀಮತಿ ಸರಸ್ವತಿ ಗಣೇಶ್, ದಿಲೀಪ್, ಮೂಕಾಂಬಿಕಾ ಸತ್ಸಂಗ ಅಧ್ಯಕ್ಷರಾದ ಶ್ರೀಮತಿ ಶುಭಾ ಅರುಣ್, ನಂಜನಗೂಡು ಬ್ರಾಹ್ಮಣ ಸಂಘದ ಫಣೀಶ್, ಶ್ರೀಮತಿ ಸುಧಾ ಪ್ರಕಾಶ್, ಶ್ರೀಮತಿ ಶೈಲಾ, ಶ್ರೀಮತಿ ಚಂದ್ರಶೇಖರ್, ಶ್ರೀಮತಿ ಪೂಜಾ ಪುನೀತ್, ಶ್ರೀಮತಿ ಹೇಮಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



