Tuesday, May 5, 2026
Google search engine

Homeಸಿನಿಮಾದಳಪತಿ ವಿಜಯ್ ತಂದೆಗೂ ಕನ್ನಡಕ್ಕೂ ಇರೋ ನಂಟೇನು..?

ದಳಪತಿ ವಿಜಯ್ ತಂದೆಗೂ ಕನ್ನಡಕ್ಕೂ ಇರೋ ನಂಟೇನು..?

ತಮಿಳುನಾಡು ಚುನಾವಣೆಯ ಫಲಿತಾಂಶದ ಬಳಿಕ ಇಡೀ ದಕ್ಷಿಣ ಭಾರತದಾದ್ಯಂತ ಕೇಳಿ ಬರುತ್ತಿರುವ ಒಂದೇ ಒಂದು ಹೆಸರು ಎಂದರು ಅದುವೇ ದಳಪತಿ ವಿಜಯ್‌. ಅವರು ಕಟ್ಟಿದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ತಮಿಳುನಾಡು ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಹೊಸ ಇತಿಹಾಸ ಬರೆದಿದೆ.

ತಮಿಳುನಾಡು ಚುನಾವಣೆಯಲ್ಲಿ ಭಾಗವಹಿಸಿದ ವಿಜಯ್‌ ನಾಯಕತ್ವದ ಟಿವಿಕೆ ತಮ್ಮ ಮೊಲ ಪ್ರಯತ್ನದಲ್ಲೇ ಭರ್ಜರಿಯಾಗಿ ಗೆದ್ದಿದೆ. ಈ ಬಳಿಕ ನೆಟ್ಟಿಗರು ವಿಜಯ್‌ ಅವರ ವೈಯಕ್ತಿಕ ಜೀವನದ ಕುರಿತು ಮಾಹಿತಿ ಕಲೆ ಹಾಕಲು ಶುರು ಮಾಡಿದ್ದಾರೆ. ಈ ವೇಳೆ ರೋಚಕ ವಿಷಯ ತಿಳಿದುಬಂದಿದೆ. ಅದುವೆ ವಿಜಯ್‌ ಅವರ ತಂದೆ ಹಾಗೂ ಕನ್ನಡ ಚಲನ ಚಿತ್ರಗಳಿಗಿರುವ ನಂಟು.

ವಿಜಯ್ ಅವರ ತಂದೆ ಎಸ್. ಎ. ಚಂದ್ರಶೇಖರ್ (SAC) ಕೇವಲ ತಮಿಳು ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಮಧುರೈ ಮೂಲದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಇವರು, ಸಿನಿಮಾ ಮೇಲಿನ ಹುಚ್ಚು ಮೋಹದಿಂದ ಚೆನ್ನೈಗೆ ಬಂದು ಸಣ್ಣಪುಟ್ಟ ಕೆಲಸ ಮಾಡಿದರು. ನಂತರ ಸಹಾಯಕ ನಿರ್ದೇಶಕರಾಗಿ ಬೆಳೆದು, 1981ರಲ್ಲಿ ‘ಸತ್ತಂ ಒರುವಿರುಂಬು’ ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಆದರೆ ಇವರಿಗೂ ಕನ್ನಡ ಸಿನಿಮಾ ರಂಗಕ್ಕೂ ಇರುವ ನಂಟಿನ ಬಗ್ಗೆ ನಿಮಗೆಷ್ಟು ಗೊತ್ತು..!

ಹೌದು, ದಳಪತಿ ವಿಜಯ್ ತಂದೆ ಕನ್ನಡದ ಖ್ಯಾತ ನಿರ್ದೇಶಕರೂ ಹೌದು. ಅವರು ಸ್ಯಾಂಡಲ್‌ವುಡ್‌ನ ಮಹಾನ್ ದಿಗ್ಗಜರಾದ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಸಿನಿಮಾ ಮಾಡಿದ್ದಾರೆ.

ಅಂಬರೀಷ್ ಅವರ ವೃತ್ತಿಜೀವನಕ್ಕೆ ಮಾಸ್ ಇಮೇಜ್ ತಂದುಕೊಟ್ಟ ‘ನ್ಯಾಯ ಎಲ್ಲಿದೆ’, ‘ಗೆದ್ದ ಮಗ’, ‘ಹಸಿದ ಹೆಬ್ಬುಲಿ’ ಸಿನಿಮಾಗಳನ್ನು ನಿರ್ದೇಶಿಸಿದ್ದು ಇದೇ ಚಂದ್ರಶೇಖರ್. ಇನ್ನು ವಿಷ್ಣುವರ್ಧನ್ ಅವರ ಅಭಿನಯದ ‘ಸಿಂಹ ಘರ್ಜನೆ’ ಮತ್ತು ‘ಗೆಲುವು ನನ್ನದೆ’ ಚಿತ್ರಗಳಿಗೂ ಇವರೇ ನಿರ್ದೇಶಕ. ಹೀಗೆ ಹಲವು ಕನ್ನಡ ನಿನಿಮಾಗಳನ್ನ ನಿರ್ದೇಶಿಸಿದ್ದಾರೆ.

ಇಂದು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ವಿಜಯ್ ಅವರನ್ನು ಬೆಳ್ಳಿತೆರೆಗೆ ತಂದಿದ್ದೇ ಈ ತಂದೆ. ವಿಜಯ್ ಬಾಲನಟನಾಗಿ ಮಿಂಚಿದ ಹಲವು ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ವಿಜಯ್ ಅವರನ್ನು ನಾಯಕನನ್ನಾಗಿ ಮಾಡಿ ‘ನಾಲಯ ತೀರ್ಪು’ ಚಿತ್ರದ ಮೂಲಕ ಅದ್ದೂರಿಯಾಗಿ ಲಾಂಚ್ ಮಾಡಿದರು.

ಚಂದ್ರಶೇಖರ್ ಅವರ ಪತ್ನಿ ಶೋಭಾ ಚಂದ್ರಶೇಖರ್ ಖ್ಯಾತ ಗಾಯಕಿ. ಈ ದಂಪತಿಗೆ ವಿಜಯ್ ಜೊತೆಗೆ ವಿದ್ಯಾ ಎಂಬ ಮಗಳಿದ್ದಳು. ಆದರೆ ದುರದೃಷ್ಟವಶಾತ್ ವಿದ್ಯಾ ಬಾಲ್ಯದಲ್ಲೇ ಮರಣ ಹೊಂದಿದಳು. ಮಗಳ ನೆನಪಿಗಾಗಿ ಇವರು ‘ವಿದ್ಯಾ ಫಿಗರ್ಸ್’ ಎಂಬ ಬ್ಯಾನರ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಮಗಳಿಗೆ ಗೌರವ ಸಲ್ಲಿಸಿದ್ದಾರೆ.



RELATED ARTICLES
- Advertisment -
Google search engine

Most Popular