Monday, July 6, 2026
Google search engine

Homeಕಾಡು-ಮೇಡುಪೋರ್ಚುಗಲ್, ಗ್ರೀಸ್ ಮತ್ತು ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚು : ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿಶಾಮಕ ದಳ

ಪೋರ್ಚುಗಲ್, ಗ್ರೀಸ್ ಮತ್ತು ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚು : ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿಶಾಮಕ ದಳ

ಯುರೋಪ್ : ಪೋರ್ಚುಗಲ್, ಗ್ರೀಸ್ ಮತ್ತು ಸ್ಪೇನ್ ದೇಶಗಳಲ್ಲಿ ಕಾಡ್ಗಿಚ್ಚಿನ ಅಟ್ಟಹಾಸ ಮುಂದುವರಿದಿದ್ದು, ಸಾವಿರಾರು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಪೋರ್ಚುಗಲ್‌ ನಲ್ಲಿ ತೀವ್ರಗೊಂಡ ಬೆಂಕಿ

ಪೋರ್ಚುಗಲ್‌ ನ ವೌಜೆಲಾ ಪ್ರದೇಶದಲ್ಲಿ ಕಳೆದ ಗುರುವಾರದಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಸುಮಾರು 12,000 ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. ಇದನ್ನು ನಿಯಂತ್ರಿಸಲು 1,200ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, 400 ವಾಹನಗಳು ಮತ್ತು 15 ವಿಮಾನಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸ್ಪೇನ್, 120 ಅಗ್ನಿಶಾಮಕ ಸಿಬ್ಬಂದಿ ಮತ್ತು 45 ವಾಹನಗಳನ್ನು ನೆರವಿಗೆ ಕಳುಹಿಸಿದ್ದು, ಇಟಲಿ ಮತ್ತು ಸ್ಪೇನ್ ಸೇರಿ ಒಟ್ಟು ಮೂರು ಅಗ್ನಿಶಾಮಕ ವಿಮಾನಗಳನ್ನು ಕಳುಹಿಸಿವೆ.

ಗ್ರೀಸ್‌ನಲ್ಲಿ ಆತಂಕಕಾರಿ ಸ್ಥಿತಿ

ಗ್ರೀಸ್‌ನ ಮಂಡ್ರಾ (Mandra) ಪ್ರದೇಶದಲ್ಲಿ ಹೊಸದಾಗಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅಥೆನ್ಸ್‌ನ ಪಶ್ಚಿಮಕ್ಕೆ ಹರಡುತ್ತಿರುವ ಈ ಬೆಂಕಿಯನ್ನು ನಂದಿಸಲು 155 ಅಗ್ನಿಶಾಮಕ ಸಿಬ್ಬಂದಿ, 16 ವಿಮಾನಗಳು ಮತ್ತು 6 ಹೆಲಿಕಾಪ್ಟರ್‌ ಗಳನ್ನು ಬಳಸಲಾಗುತ್ತಿದೆ. ಇದಲ್ಲದೆ ಎರಡನೇ ಅತಿದೊಡ್ಡ ನಗರವಾದ ಥೆಸಲೋನಿಕಿಯಲ್ಲಿ ಮರುಬಳಕೆ ಘಟಕವೊಂದು ಬೆಂಕಿಗೆ ಆಹುತಿಯಾಗಿದ್ದು, ವಿಷಕಾರಿ ಹೊಗೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡು ಮನೆಯೊಳಗೆ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸ್ಪೇನ್‌ ನಲ್ಲೂ ಮುಂದುವರಿದ ಅಗ್ನಿ ತಾಂಡವ

ಸ್ಪೇನ್‌ನ ಈಶಾನ್ಯ ಜಿರೋನಾ (Girona) ಪ್ರದೇಶದಲ್ಲಿ ಶುಕ್ರವಾರದಿಂದ ಕಾಡ್ಗಿಚ್ಚು ಉರಿಯುತ್ತಿದೆ. ಈವರೆಗೆ ಸುಮಾರು 2,200 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, 40 ಕಿಲೋಮೀಟರ್ ಸುತ್ತಳತೆಯಲ್ಲಿ ಬೆಂಕಿ ಹರಡಿದೆ. ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವುದು ಸದ್ಯಕ್ಕೆ ಕಷ್ಟಸಾಧ್ಯ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular