Saturday, May 2, 2026
Google search engine

Homeಸ್ಥಳೀಯಗಮಕ ಕಲೆಗೆ ಯುವಕರ ಪ್ರೋತ್ಸಾಹ ಅಗತ್ಯ : ಡಾ. ಕೊಂಗಳಪ್ಪ

ಗಮಕ ಕಲೆಗೆ ಯುವಕರ ಪ್ರೋತ್ಸಾಹ ಅಗತ್ಯ : ಡಾ. ಕೊಂಗಳಪ್ಪ

ಕೊಳ್ಳೇಗಾಲ : ಪುರಾತನವಾದ ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜೆಎಸ್ಎಸ್ ಮಹಿಳಾ ಪದವಿ ಕಾಲೇಜು ಆಚಾರ್ಯರಾದ ಡಾ. ಎಚ್ಎಸ್ ಕೊಂಗಳಪ್ಪ ತಿಳಿಸಿದರು.
ಅವರು ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ, ಜೆ ಎಸ್ ಎಸ್ ಸಂಸ್ಥೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು,ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಜೆಎಸ್ಎಸ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಮಕ ವಾಚನ, ವ್ಯಾಖ್ಯಾನ ಮತ್ತು ಉದ್ಘಾಟನಾ ಸಮಾರಂಭವನ್ನು ನೆಲೆವೇರಿಸಿ ಮಾತನಾಡುತ್ತ ಗಮಕ ಕಲೆಯ ಬಗ್ಗೆ ಆಸಕ್ತಿಯನ್ನು ಯುವ ಸಮುದಾಯ ಬೆಳೆಸಿಕೊಳ್ಳಬೇಕು. ಕರ್ನಾಟಕ ಗಮಕ ಕಲಾ ಪರಿಷತ್ ಹಮ್ಮಿಕೊಂಡಿರುವ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪ್ರಾಚೀನ ಕಲೆಯಾದ ಗಮಕ ಕಲೆ 64 ವಿದ್ಯೆ ಗಳಲ್ಲಿ ವಿಶೇಷವಾದಕಲೆ.ವಾಲ್ಮೀಕಿ ರಾಮಾಯಣ ಕಾಲದಿಂದ ಪ್ರಚಲಿತದಲ್ಲಿರುವ ಪ್ರಮುಖ ಕಲೆ. ಸ್ವತಃ ಲವ ಮತ್ತು ಕುಶ ಯಿಂದ ವಾಲ್ಮೀಕಿ ಅವರು ಗಮಕವಾಚನ ವ್ಯಾಖ್ಯಾನ ಮಾಡಿಸಿದ ಇತಿಹಾಸವಿದೆ. ವೇದಗಳಲ್ಲಿಯೂ ಗಮಕದ ದಾಖಲೆಗಳಿವೆ. ಕುಮಾರವ್ಯಾಸ ಭಾರತ, ವಾಲ್ಮೀಕಿ ರಾಮಾಯಣ, ತೊರೆವೆ ರಾಮಾಯಣ ಜನಪ್ರಿಯವಾಗಿದೆ ಗಮಕದ ಮೂಲಕ ನಾಡಿನ ಎಲ್ಲೆಡೆ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ಯುವ ಜನಾಂಗ ಈ ಕಲೆಯನ್ನು ಬೆಳೆಸಿಕೊಳ್ಳುವಲ್ಲಿ ನಿರಾಸಕ್ತಿಯನ್ನು ಹೊಂದಿದ್ದಾರೆ.ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗದೆ ಭಾರತೀಯ ನೃತ್ಯ,ಸಂಗೀತ, ಜನಪದ,ಸಾಹಿತ್ಯ, ಜಾನಪದ ಹಾಗೂ ಗಮಕಕಲೆ ಬಗ್ಗೆ ಹೆಚ್ಚು ಸ್ಪೂರ್ತಿಯನ್ನು ಬೆಳೆಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿ ಪರಂಪರೆ ಕಲಾ ಪ್ರಕಾರಗಳು ಉಳಿದಿರುವುದು ಭಾರತೀಯ ಸ್ತ್ರೀ ಶಕ್ತಿಯಿಂದ ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಲಾಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ನಿರಂಜನ್ ಮೈಸೂರು ಮಾತನಾಡಿ ಚಾಮರಾಜನಗರ ಜಿಲ್ಲೆ ಗಮಕ ಕಲೆಗೆ ಪ್ರಸಿದ್ದಿಯಾಗಿತ್ತು. ಗಮಕಿಗಳಾದ ಅಶ್ವಥ್ ನಾರಾಯಣ್, ವೆಂಕಟಸುಬ್ಬಯ್ಯ, ಕಲಾಶ್ರೀ ರಾಮದಾಸ್ ಮುಂತಾದವರು ಜನಪ್ರಿಯಗೊಳಿಸಿದ್ದರು. ಆದರೆ ಇಂದು ಗಮಕ ಕಲೆ ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ. ಕಲಿಯುವ ಆಸಕ್ತರು ಗಮಕವನ್ನು ಕಲಿಯುವ ಪ್ರಯತ್ನ ಮಾಡಿ ಕಲೆಯನ್ನು ಉಳಿಸಬೇಕು. ಗಮಕಕಲೆ ಉಚ್ಚಾರಣೆ,ಕಂಠ ಪ್ರಧಾನ ಹಾಗೂ ರಸಭಾವಗಳಿಂದ ಕೂಡಿದ ಮಧುರ ಸಂಗೀತದ ಧ್ವನಿಯಾಗಿದ್ದು ಅದರ ಅರ್ಥವನ್ನು ತಿಳಿಯುವ ವಿಶೇಷ ಕಾರ್ಯಕ್ರಮವಾಗಿದೆ ಎಂದರು.

ಮೈಸೂರಿನ ಯುವಗಮಕಿಗಳಾದ ಗಮಕಿ ಪ್ರತಿಕ್ಷ ಮತ್ತು ಅನನ್ಯ ರವರು ತೊರುವೆ ರಾಮಾಯಣದ ಸುಗ್ರೀವ ಸಖ್ಯ ಕುರಿತು ಒಂದು ಗಂಟೆಗಳ ಕಾಲ ವಾಚನಾ ಮತ್ತು ವ್ಯಾಖ್ಯಾನವನ್ನು ನಡೆಸಿಕೊಟ್ಟರು ನೂರಾರು ಸಂಖ್ಯೆಯ ಆಸಕ್ತರಿಗೆ ಗಮಕ ಕಲೆಯ ಆಸಕ್ತಿಯನ್ನು ಹೆಚ್ಚಿಸಿದರು. ಮಧುರ ಧ್ವನಿಯಲ್ಲಿ ಗಮಕ ವಾಚನ ಪ್ರೇಕ್ಷಕ ರನ್ನು ಸಂತೋಷಗೊಳಿಸಿತು.
ಅಧ್ಯಕ್ಷತೆಯನ್ನು ಕರ್ನಾಟಕ ಗಮಕಲಾ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಕೊಂಗರಹಳ್ಳಿ ನಾಗರಾಜ ವಹಿಸಿ ಮಾತನಾಡಿ ಯುವಕರು ಮಹಾಕಾವ್ಯಗಳು ರಾಮಾಯಣ, ಮಹಾಭಾರತ ವಚನಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಗ್ರಂಥಗಳನ್ನು ಅಧ್ಯಯನ ಮಾಡಿ.ಶಿಕ್ಷಣದ ಜೊತೆಗೆ ಕಲೆಯನ್ನು ಬೆಳೆಸುವ ಕೆಲಸವನ್ನು ಮಾಡಲು ಗಮಕಲೆಯಂತಹ ಪ್ರೋತ್ಸಾಹಕ ಕಾರ್ಯಕ್ರಮಗಳು ಸದಾ ಕಾಲ ನೆರವೇರಲಿ ಎಂದು ತಿಳಿಸಿದರು.
ವಾಚನ ಮತ್ತು ವ್ಯಾಖ್ಯಾನ ಮಾಡಿದ ಮೈಸೂರಿನ ಕುಮಾರಿ ಪ್ರತಿಕ್ಷ ಮತ್ತು ಅನನ್ಯ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular