ಬೆಂಗಳೂರು : ದೆಹಲಿಗೆ ತೆರಳಿರುವ ಡಿಸಿಎಂ ಡಿಕೆಶಿ ಪರವಾಗಿ ನಾವಿದ್ದೇವೆ. ಅವರು ನಾಳೆನೇ ಬರಲಿ ತೊಂದರೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವೇಳೆ ಡಿಸಿಎಂ ಡಿಕೆಶಿ ದೆಹಲಿಯಲ್ಲೇ ಉಳಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ಪರವಾಗಿ ನಾವಿದ್ದೇವೆ. ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಆರ್‌ಎಸ್‍ಎಸ್ ಬಗ್ಗೆ ಮಾಜಿ ಸಂಸದ ಅನಂತ ಕುಮಾರ್ ಹೆಗ್ಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್‌ಎಸ್‍ಎಸ್ ಬ್ಯಾನ್ ಮಾಡ್ತೀವಿ ಅಂತ ಯಾರೂ ಹೇಳಿಲ್ಲ. ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಚಟುವಟಿಕೆಗಳ ನಿಷೇಧ ಬೇರೆ, ಇದು ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಭಾನುವಾರ(ಮಾ.8) ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಡಿ.ಕೆ ಶಿವಕುಮಾರ್ ತೆರಳಿದ್ದರು. ಇಂದು(ಮಾ.9) ಬೆಳಗ್ಗೆ ದೆಹಲಿಯಿಂದ ಅವರು ವಾಪಸ್ ಆಗಬೇಕಿತ್ತು. ಇಂದು ಕೂಡಾ ದೆಹಲಿಯಲ್ಲಿರಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ.



