Tuesday, March 10, 2026
Google search engine

Homeಅಡುಗೆಸಿಲಿಂಡರ್ ದರ ಏರಿಕೆ ಪರಿಣಾಮ : ತಿಂಡಿ-ತಿನಿಸು ಬೆಲೆ ಹೆಚ್ಚಳ ಸಾಧ್ಯ

ಸಿಲಿಂಡರ್ ದರ ಏರಿಕೆ ಪರಿಣಾಮ : ತಿಂಡಿ-ತಿನಿಸು ಬೆಲೆ ಹೆಚ್ಚಳ ಸಾಧ್ಯ

ಬೆಂಗಳೂರು : ಎಲ್‌ಪಿಜಿ ದರ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ– ತಿನಿಸುಗಳು ಹಾಗೂ ಅಗತ್ಯ ವಸ್ತುಗಳ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ರೂ.115 ಹೆಚ್ಚಿಸಲಾಗಿದ್ದು, ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯೂ ರೂ.60 ಏರಿಕೆಯಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ವೆಚ್ಚ ಏರಿಕೆಯಾಗಿರುವುದರಿಂದ ಎಲ್‌ಪಿಜಿ ದರ ಏರಿಕೆಯಾಗಿದೆ.

ಬೆಂಗಳೂರು ಬೃಹತ್ ಹೋಟೆಲ್ ಅಸೋಸಿಯೇಷನ್ ​​(ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ಅವರು ಮಾತನಾಡಿ, ಈ ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ಸುಮಾರು ರೂ.150 ರಿಯಾಯಿತಿ ನೀಡಲಾಗುತ್ತಿತ್ತು. ಮಾರ್ಚ್ 1ರಿಂದ ಆ ರಿಯಾಯಿತಿಯನ್ನು ನಿಲ್ಲಿಸಲಾಗಿದೆ. ಈಗ ಮತ್ತೆ ರೂ.115 ದರ ಹೆಚ್ಚಳವಾಗಿದೆ. ಹೀಗಾಗಿ ಪ್ರತಿ ಸಿಲಿಂಡರ್‌ಗೆ ಒಟ್ಟು ಸುಮಾರು ರೂ.265 ಹೆಚ್ಚುವರಿ ಹೊರೆ ಬೀಳುತ್ತಿದೆ. ಇದೀಗ ಹೋಟೆಲ್‌ಗಳು ಆಹಾರ ತಯಾರಿಕೆಗೆ ಬಳಸುವ ಹಲವು ಮೂಲ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿದೆ. ಅಡುಗೆ ಎಣ್ಣೆ ದರ ಪ್ರತಿ ಕಿಲೋಗ್ರಾಂಗೆ ಸುಮಾರು ರೂ.15ರಿಂದ ರೂ.20ರವರೆಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಕಾಫಿ ಬೀಜಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರೇವಿ ಮತ್ತು ಸಿಹಿತಿಂಡಿಗಳಲ್ಲಿ ವ್ಯಾಪಕವಾಗಿ ಬಳಸುವ ಗೋಡಂಬಿ ಸೇರಿದಂತೆ ಡ್ರೈಫ್ರೂಟ್ಸ್‌ಗಳ ಬೆಲೆ ಸುಮಾರು 20ರಿಂದ 25 ಶೇಕಡಾವರೆಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular