ಮಂಗಳೂರು
ತೋಟಬೆಂಗ್ರೆಯ ಲೋಕನಾಥ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಪನಾ(18) ಯುವತಿ ಮಾ.6 ರಂದು ಎಂದಿನಂತೆ ಬಂದರಿನಲ್ಲಿರುವ ವಿವೇಕ್ ಮಾರ್ಟ್‍ಗೆ ಕೆಲಸಕ್ಕೆಂದು ಹೋದವರು ವಾಪಾಸು ಬಾರದೆ ಕಾಣೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ : 4.8 ಅಡಿ ಎತ್ತರ, ಸಾಧಾರಣ ಕಪ್ಪು ಮೈ ಬಣ್ಣ, ದುಂಡಗಿನ ಶರೀರ ಹೋದಿದ್ದು, ಬಿಳಿ ಬಣ್ಣದ ನೆಟ್ ಇರುವ ಚೂಡಿದಾರ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ ಭೋಜಪುರಿ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲಸಕ್ಕೆ ಹೋದ ಯುವತಿ ನಾಪತ್ತೆ
RELATED ARTICLES



