Wednesday, March 11, 2026
Google search engine

Homeರಾಜ್ಯಸುದ್ದಿಜಾಲಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಬೇಕು : ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ

ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಬೇಕು : ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ

ಬಾಗಲಕೋಟೆ : ಪ್ರಸ್ತುತ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರ ನಿರ್ದೇಶನ ಪ್ರೇರೇಪಿಸುವುದರ ಮೂಲಕ ಅವರಿಗೆ ಉನ್ನತ ಸ್ಥಾನಮಾನ ನೀಡಬೇಕು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪುರುಷರು ಮಹಿಳೆಯರೊಂದಿಗೆ ಕೈಜೋಡಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಳಿಕ ಅತಿಥಿಯಾಗಿದ್ದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾದ್ಯಾಪಕಿ ಭಾರತಿ ಮೇಟಿ ಮಾತನಾಡಿ, ಮಹಿಳೆಯರು ಜಂಕ್ ಫುಡ್ ತ್ಯಜಿಸಿ ಸಾಂಪ್ರದಾಯಿಕ ಆಹಾರ ಪದ್ಧತಿ ರೂಢಿಸಿಕೊಂಡು ಕುಟುಂಬದ ಆರೋಗ್ಯ ಕಾಪಾಡಬೇಕು. ಯೋಗ ಮತ್ತು ವ್ಯಾಯಾಮ ಮಾಡುವುದರ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು ಎಂದರು.

ತೋಟಗಾರಿಕೆ ವಿವಿ ಕುಲಪತಿ ವಿಷ್ಣುವರ್ಧನ್ ಮಾತನಾಡಿ, ಸಮಾಜದಲ್ಲಿನ ಲಿಂಗಭೇದವನ್ನು ತ್ಯಜಿಸಿ ಹೆಣ್ಣು ಮತ್ತು ಗಂಡು ಒಂದೇ ಎನ್ನುವ ಸಮಾನತೆಯ ಮಂತ್ರ ಅಳವಡಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿರುವುದರಿಂದ ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ತಿಳಿಸಿದರು.

ಈ ವೇಳೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ತೋವಿವಿ ಅಧಿಕಾರಿಗಳಾದ ತಮ್ಮಯ್ಯ.ಎನ್, ಬಿ.ಫಕ್ರುದ್ದೀನ್, ವೆಂಕಟೇಶಲು, ಬಾಲಾಜಿ ಕುಲಕರ್ಣಿ, ಮಲ್ಲಿಕಾರ್ಜುನ ಶೆಲ್ಲಿಕೇರಿ, ರವೀಂದ್ರ ಕಾಂಬಳೆ, ಶಾಂತಪ್ಪ ತಿರಕಣ್ಣನವರ, ಐ.ಬಿ.ಬಿರಾದಾರ, ವಸಂತ ಗಾಣಿಗೇರ, ಈ.ರಾಜಶೇಖರ ಇದ್ದರು.

RELATED ARTICLES
- Advertisment -
Google search engine

Most Popular