Monday, March 16, 2026
Google search engine

Homeರಾಜ್ಯಗ್ಯಾಸ್ ಕೊರತೆಯಿಂದ ₹100 ಕೋಟಿ ನಷ್ಟ : ಹೋಟೆಲ್ ಸಂಘ ಅಳಲು

ಗ್ಯಾಸ್ ಕೊರತೆಯಿಂದ ₹100 ಕೋಟಿ ನಷ್ಟ : ಹೋಟೆಲ್ ಸಂಘ ಅಳಲು

ಬೆಂಗಳೂರು : ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್‌ಗಳಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, 20% ಕಮರ್ಷಿಯಲ್ ಗ್ಯಾಸ್ ನೀಡೋದಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಬೆನ್ನಲ್ಲೇ ಹೋಟೆಲ್ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿಗೆ ಮುಂದಾಗಿದೆ. ಸಭೆ ಕೂಡ ನಿಗದಿ ಆಗಿದೆ.

ಗ್ಯಾಸ್ ಎಮರ್ಜೆನ್ಸಿ ಶುರುವಾಗಿ ಬೆಂಗಳೂರಿನ ಹೋಟೆಲ್‌ಗಳು ಬಹುತೇಕ ಮುಚ್ಚಿವೆ. ಕೆಲ ಹೋಟೆಲ್‌ಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ನಡೆಯುತ್ತಿವೆ. ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಸಂಘಕ್ಕೆ ಅಂದಾಜು 100 ಕೋಟಿ ವೆಚ್ಚದಲ್ಲಿ ನಷ್ಟ ಆಗಿದೆ. ಹೀಗಾಗಿ ಗ್ಯಾಸ್‌ಗಾಗಿ ಪರದಾಡುತ್ತಿದ್ದು, ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಸೇಲ್ ಆಗುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದ್ದೆಲ್ಲದರ ನಡುವೆ ಈಗ 20% ಕಮರ್ಷಿಯಲ್ ಗ್ಯಾಸ್ ವಿತರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ರಾಜ್ಯ ಸರ್ಕಾರ ಗ್ಯಾಸ್ ಏಜೆನ್ಸಿಗಳಿಗೆ 20% ಗ್ಯಾಸ್ ಕೊಡೋದಕ್ಕೆ ಸೂಚಿಸಿದೆ. 20% ಗ್ಯಾಸ್ ವಿತರಣೆ ಸಂಬಂಧ ಬೆಂಗಳೂರು ಹೋಟೆಲ್ ಸಂಘ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನ ಭೇಟಿ ಮಾಡಿ ಮಾತುಕತೆ ಮಾಡಲಿದೆ. 

ಇನ್ನೂ ಬೆಂಗಳೂರು ಹೋಟೆಲ್ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನ ಭೇಟಿ ಅಗಲಿದ್ದಾರೆ. ಇದುವರೆಗೂ ಆಗಿರುವ ನಷ್ಟ ಮತ್ತು ಸಮಸ್ಯೆ ಬಗ್ಗೆ ಬಿಚ್ಚಿಡಲಿದ್ದಾರೆ. ಪ್ರಮುಖವಾಗಿ ಗ್ಯಾಸ್ ಗಾಗಿ ಬೇಡಿಕೆ ಇಡಲಿದ್ದಾರೆ. 20% ಗ್ಯಾಸ್ ಸಮರ್ಪಕವಾಗಿ ಸಿಗುವ ವಿಚಾರ ಮಾತುಕತೆ ಆಗಲಿದೆ. 15% ಗ್ಯಾಸ್ ಹೋಟೆಲ್ ಗೆ ಬೇಕಾಗಿದ್ದು ಅದರಲ್ಲಿ ಅರ್ಧ 7% ಗ್ಯಾಸ್ ಕೊಟ್ರು ಹೋಟೆಲ್ ಗಳು ನಡೆಯುತ್ತವೆ ಸದ್ಯ ಈಗ ಬರೀ 2% ಗ್ಯಾಸ್ ಸಿಕ್ತಿದೆ ಇದು ಭಾರೀ ನಷ್ಟದ ಜೊತೆಗೆ ಹೋಟೆಲ್‌ಗಳು ಮುಚ್ಚೋದಕ್ಕೆ ಕಾರಣ ಆಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. 

ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್‌ಗಳಿಗೆ ಸಮಸ್ಯೆ ಆಗುತ್ತಿದ್ದು, ಗ್ಯಾಸ್ ಸರಬರಾಜು ಕಂಪನಿಗಳ ಜೊತೆ ಸರ್ಕಾರದ ಸಭೆ ಇದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಗ್ಯಾಸ್ ವಿತರಣೆ ಸಂಬಂಧ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ. 

RELATED ARTICLES
- Advertisment -
Google search engine

Most Popular