ಬೆಂಗಳೂರು : ಮಧ್ಯಪ್ರಾಚ್ಯ ಸಂಘರ್ಷದಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೆ ಶಾಕ್ ಕೊಟ್ಟಿದ್ದು, ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ತೈಲ ಪೂರೈಕೆ ಕಂಪನಿಗಳ ಜೊತೆ ಮಹತ್ವದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಎರಡನೇ ಪತ್ರ ಬರೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೊಡಬೇಕು. ಇಂದು ಕಮೀಷನರ್ ಹಾಗೂ ತೈಲ ಕಂಪನಿಗಳ ಮುಖ್ಯಸ್ಥರು ಜೊತೆ ಸಭೆ ನಡೆಸಲಾಯಿತು ಎಂದರು.
ಒಂದು ಗಂಟೆಯ ತನಕ ಸಭೆಯಾಗಿದೆ. ವಿನಾಕಾರಣ ಆತಂಕಕ್ಕೆ ಒಳಗಾಗಬಾರದು ಎಂದು ಗ್ರಾಹಕರಲ್ಲಿ ಮನವಿ ಮಾಡುತ್ತೇವೆ. ಗ್ಯಾಸ್ ಡಬಲ್ ಬುಕ್ಕಿಂಗ್ ಬೇಡ. ಮಿತವ್ಯಯದಲ್ಲಿ ಬಳಕೆ ಮಾಡಿ. ಹಡಗುಗಳ ಮೂವ್‌ಮೆಂಟ್ ಆರಂಭವಾಗಿದ್ದು, ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್, ರೈಲ್ವೆ ಕ್ಯಾಂಟೀನ್‌ಗಳಿಗೆ ೧೦೦% ರಷ್ಟು ಸಿಲಿಂಡರ್ ನೀಡಲು ಒಪ್ಪಿಗೆ ನೀಡಲಾಗಿದೆ. ಆರೂವರೆ ಸಾವಿರ ಸಿಲಿಂಡರ್ ಗಳ ಪ್ರತಿದಿನ ಖರ್ಚಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಇದರಲ್ಲಿ ೪೨೦೦ ಸಿಲಿಂಡರ್ ಎಸೆನ್ಸಿಯಲ್ ವಲಯಕ್ಕೆ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದುವರೆದು, ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಇಂದಿರಾ ಕ್ಯಾಂಟೀನ್‌ಗಳಿಗೆ ೪೨೦೦+೧೨೦೦, ಎಸೆನ್ಸಿಯಲ್ ಸರ್ವಿಸ್ ವಲಯಕ್ಕೆ ೫೨೦೦ ಪೂರೈಕೆ, ೨೨೫೦ ಸಿಲಿಂಡರ್‌ಗಳು ಆಟೋಗಳಿಗೆ ಪೂರೈಕೆ ಮಾಡಲಾಗ್ತಿದೆ. ಹೊಟೇಲ್‌ಗಳಿಗೆ ಸದ್ಯಕ್ಕೆ ಪೂರೈಕೆ ಆಗಲ್ಲ. ಎಲೆಕ್ಟ್ರಿಕ್ ಸ್ಟವ್ ಬಳಕೆ ಮಾಡುವಂತೆ ಸಚಿವರು ಮನವಿ ಮಾಡಿದರು.
೧ ಸಾವಿರ ಸಿಲಿಂಡರ್ ಒಂದು ದಿನಕ್ಕೆ ಪೂರೈಕೆ ಮಾಡಲಾಗುವುದು. ಇದರಲ್ಲಿ ಹೋಟೆಲ್ ಅಸೋಸಿಯೇಷನ್ ಕೂಡ ಇದ್ದು, ಹೋಟೆಲ್ ಸರ್ವಿಸರ್‌ಗಳ ಬಳಕೆಗೆಯಾದ್ರೂ ಸಿಲಿಂಡರ್ ಬೇಕಾಗುತ್ತೆ. ರಾಜ್ಯದಲ್ಲಿ ೪೪ ಸಾವಿರ ಸಿಲಿಂಡರ್‌ಗಳು ಹೊಟೇಲ್‌ಗಳಿಗೆ ಪೂರೈಕೆ ಆಗ್ತಿತ್ತು ಎಂದು ವಿವರಿಸಿದರು.



