Saturday, March 21, 2026
Google search engine

Homeಸ್ಥಳೀಯರಂಜಾನ್ ಹಬ್ಬಕ್ಕೆ ಸಿಎಂ ಶುಭಾಶಯ, ಪ್ರೀತಿ, ಮಾನವೀಯತೆಯ ಸಂದೇಶ ನೀಡಿದ ಸಿಎಂ

ರಂಜಾನ್ ಹಬ್ಬಕ್ಕೆ ಸಿಎಂ ಶುಭಾಶಯ, ಪ್ರೀತಿ, ಮಾನವೀಯತೆಯ ಸಂದೇಶ ನೀಡಿದ ಸಿಎಂ

ಬೆಂಗಳೂರು : ರಂಜಾನ್ ಹಬ್ಬದ ಹಿನ್ನೆಲೆ ನಗರದ ಬೆನ್‌ಸನ್ ಟೌನ್‌ನ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಬಾಂಧವರ ಜೊತೆ ಸಿಎಂ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ, ನಾವೆಲ್ಲಾ ಶಾಂತಿಯುತವಾಗಿ, ಮಾನವೀಯತೆಯಿಂದ ಬಾಳಬೇಕು. ಭಾರತ ದೇಶ ಅನೇಕ ಧರ್ಮಗಳಿಂದ ಕೂಡಿದೆ. ಯಾವುದೇ ಧರ್ಮವು ಪ್ರೀತಿಯನ್ನು ಬೋಧಿಸಿದೆ, ದ್ವೇಷವನ್ನಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲಾ ಮುಸ್ಲಿಂ ಬಾಂಧವರಿಗೂ ಈದ್ ಮುಬಾರಕ್ ಎಂದರು. 

ಇಂದು ರಂಜಾನ್ ಹಬ್ಬ. ನಾವೆಲ್ಲ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡಿದ್ದೇವೆ. ಮನುಕುಲಕ್ಕೆ ಹಾಗೂ ದೇವರಿಗೆ ಪ್ರಾರ್ಥನೆ ಮಾಡಿದ್ದೇವೆ. ನಾವೆಲ್ಲ ಮಾನವರಾಗಿ ಬಾಳೋದು ಅವಶ್ಯ. ನಾವೆಲ್ಲ ಮಾನವೀಯತೆಯಿಂದ, ಪ್ರೀತಿ ವಿಶ್ವಾಸದಿಂದ ಇರಬೇಕು. ಅನೇಕ ಸಂಸ್ಕೃತಿ, ಧರ್ಮ ಇದ್ರೂ ಏಕತೆಯಿಂದ ಇರಬೇಕು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular