Tuesday, March 24, 2026
Google search engine

Homeಕ್ರೀಡೆಐಪಿಎಲ್ 2026ರಲ್ಲಿ ಆರ್‌ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ

ಐಪಿಎಲ್ 2026ರಲ್ಲಿ ಆರ್‌ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ

ಬೆಂಗಳೂರು: ಐಪಿಎಲ್ 2026 ಆವೃತ್ತಿಯಲ್ಲಿ ಆರ್‌ಸಿಬಿ ತಂಡಕ್ಕೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪ್ರಾಯೋಜಕತ್ವ ನೀಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ತಿಳಿಸಿದ್ದಾರೆ. ಈ ಒಪ್ಪಂದದ ಮೂಲಕ ನಂದಿನಿ ಉತ್ಪನ್ನಗಳನ್ನು ದೇಶದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರಿಚಯಿಸುವುದು ಉದ್ದೇಶವಾಗಿದೆ ಎಂದರು.

ಆರ್‌ಸಿಬಿ ತಂಡಕ್ಕೆ ಹೆಚ್ಚಿನ ಅಭಿಮಾನಿಗಳಿದ್ದು, ಬ್ರ್ಯಾಂಡ್ ಪ್ರಚಾರಕ್ಕೆ ಇದು ಸಹಕಾರಿ ಎಂದು ಹೇಳಿದರು. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ದೇವದತ್ತ ಪಡಿಕಲ್ ಸೇರಿದಂತೆ ಆಟಗಾರರ ಮೂಲಕ ಪ್ರಚಾರ ನಡೆಸಲಾಗುತ್ತದೆ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಶಿವಸ್ವಾಮಿ ತಿಳಿಸಿದರು.

RELATED ARTICLES
- Advertisment -
Google search engine

Most Popular