Saturday, April 4, 2026
Google search engine

Homeರಾಜ್ಯಕಂದಾಯ ನೌಕರರ ಸಂಘದ ಅಧ್ಯಕ್ಷರಾಗಿ ಕೆ ಎನ್ ಮಧುಸೂದನ್ ಆಯ್ಕೆ

ಕಂದಾಯ ನೌಕರರ ಸಂಘದ ಅಧ್ಯಕ್ಷರಾಗಿ ಕೆ ಎನ್ ಮಧುಸೂದನ್ ಆಯ್ಕೆ

ನಾಗಮಂಗಲ :ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ನಾಗಮಂಗಲ ತಾಲೂಕು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಹೊಣಕೆರೆ ವೃತ್ತದ ರಾಜಸ್ವ ನಿರೀಕ್ಷಕ ಕೆ ಎನ್ ಮಧುಸೂದನ್ 54 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.

ತಹಶೀಲ್ದಾರ್  ಅಧ್ಯಕ್ಷತೆಯಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರ ಸ್ಥಾನಕ್ಕೆ ಮಲ್ಲಿಕಾರ್ಜುನ ಸ್ವಾಮಿ, ಮಾದೇಶ ಕುಮಾರ್  ಹಾಗೂ ಮಧುಸೂದನ್ ಮೂವರು ಅಧ್ಯಕ್ಷರ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು.   ತಾಲೂಕು ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಚುನಾವಣೆ ನಡೆದಿದ್ದು ಒಟ್ಟು 59 ಮತಗಳು ಚಲಾವಣೆಯಾಗಿವೆ. ಮಲ್ಲಿಕಾರ್ಜುನ ಸ್ವಾಮಿ 4ಮತಗಳು, ಮಾದೇಶ ಕುಮಾರ್ 1 ಮತ, ಮಧುಸೂದನ್ 54ಮತಗಳನ್ನ ಪಡೆದುಕೊಳ್ಳುವ ಮೂಲಕ ಜಯಶೀಲರಾಗಿದ್ದಾರೆ.

ಮುಂದಿನ ಮೂರು ವರ್ಷಗಳ ಕಾಲ ನಾಗಮಂಗಲ ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿ ಮಧುಸೂದನ್ ಕಾರ್ಯನಿರ್ವಹಿಸಲಿ ದ್ದಾರೆ. ತಾಲೂಕು ಆಡಳಿತ ವತಿಯಿಂದ ಜಯಶೀಲ ಅಭ್ಯರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಧುಸೂದನ್ ಮಾತನಾಡಿ ಮುಂದಿನ ಮೂರು ವರ್ಷಗಳ ಅವಧಿಗೆ ತಾಲೂಕು ನೌಕರರ ಸಂಘದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ನನ್ನ ಮೇಲೆ ವಿಶ್ವಾಸ ಇಟ್ಟು ಮಾತಗಳನ್ನು ನೀಡಿದ ಕಂದಾಯ ನೌಕರರಿಗೆ ಕೃತಜ್ಞತೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular