Monday, April 6, 2026
Google search engine

Homeಕ್ರೀಡೆಆರ್ಚರಿ ಪಟು ಪಾಯಲ್ ನಾಗ್ ಗೆ ಚಿನ್ನದ ಪದಕ

ಆರ್ಚರಿ ಪಟು ಪಾಯಲ್ ನಾಗ್ ಗೆ ಚಿನ್ನದ ಪದಕ

ಬ್ಯಾಂಕಾಕ್ : ಭಾರತದ ಪ್ಯಾರಾ ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಪ್ರೇರಣಾದಾಯಕ ಅಧ್ಯಾಯ ಬರೆಯಲಾಗಿದೆ. ಎರಡೂ ಕೈ ಮತ್ತು ಕಾಲುಗಳಿಲ್ಲದ ಯುವ ಆರ್ಚರಿ ಪಟು ಪಾಯಲ್ ನಾಗ್ ಅವರು ವಿಶ್ವದ ನಂ.1 ಬಿಲ್ಲುಗಾರ್ತಿ ಶೀತಲ್ ದೇವಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಥಾಯ್ಲ್ಯಾಂಡ್‌ ನ ಬ್ಯಾಂಕಾಕ್‌ ನಲ್ಲಿ ನಡೆದ ವರ್ಲ್ಡ್ ಪ್ಯಾರಾ ಆರ್ಚರಿ ಸೀರಿಸ್‌ ನಲ್ಲಿ ಮಹಿಳೆಯರ ಕಾಂಪೌಂಡ್ ವಿಭಾಗದ ಫೈನಲ್‌ ನಲ್ಲಿ ಪಾಯಲ್ ನಾಗ್ 139-136 ಅಂತರದಲ್ಲಿ ಶೀತಲ್ ದೇವಿಯನ್ನು ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಭಾರತದ ಭರ್ಜರಿ ಪ್ರದರ್ಶನ

ಈ ಟೂರ್ನಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು 7 ಚಿನ್ನ, 3 ಬೆಳ್ಳಿ ಮತ್ತು 3 ಕಂಚು ಸೇರಿ 13 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಾಯಲ್ ನಾಗ್ – ಪ್ರೇರಣೆಯ ಪ್ರತೀಕ

18 ವರ್ಷದ ಪಾಯಲ್ ನಾಗ್ ಅವರ ಸಾಧನೆ ಕೇವಲ ಕ್ರೀಡಾ ಗೆಲುವಲ್ಲ, ಅದು ಜೀವನದ ಹೋರಾಟದ ಗೆಲುವಾಗಿದೆ. ಒಡಿಶಾದ ಬಲಂಗೀರ್ ಜಿಲ್ಲೆಯ ವಲಸೆ ಕಾರ್ಮಿಕರ ಮಗಳಾದ ಅವರು 2015ರಲ್ಲಿ ವಿದ್ಯುತ್ ಅಪಘಾತದಲ್ಲಿ ತಮ್ಮ ಎರಡೂ ಕೈಕಾಲುಗಳನ್ನು ಕಳೆದುಕೊಂಡಿದ್ದರು.

ಆದರೂ ಅದನ್ನು ಸವಾಲಾಗಿ ಸ್ವೀಕರಿಸಿ, ಅಸಾಧಾರಣ ಮನೋಬಲದಿಂದ ಕ್ರೀಡೆಯಲ್ಲಿ ತೊಡಗಿಕೊಂಡು ಇಂದು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ತರಬೇತಿ ಮತ್ತು ಬೆಳವಣಿಗೆ

ಪಾಯಲ್ ಅವರು ಕತ್ರಾಯ ಮಾತಾ ವೈಷ್ಣೋದೇವಿ ಕ್ರೀಡಾ ಸಂಕೀರ್ಣದಲ್ಲಿ ಶೀತಲ್ ದೇವಿಯವರೊಂದಿಗೆ ತರಬೇತಿ ಪಡೆದಿದ್ದರು. ನಂತರ ಸೋನಪತ್ನಲ್ಲಿ ತರಬೇತಿ ಮುಂದುವರಿಸಿದರು.

2025ರಲ್ಲಿ ಪ್ಯಾರಾ ನ್ಯಾಶನಲ್ಸ್‌ ನಲ್ಲಿ ಶೀತಲ್ ವಿರುದ್ಧ ಜಯ ಸಾಧಿಸಿದ್ದ ಅವರು, ಇದೇ ವರ್ಷ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಮೇಲುಗೈ ಸಾಬೀತುಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular