Tuesday, April 7, 2026
Google search engine

Homeದೇಶಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ವಾಗ್ದಂಡನೆ ನೋಟಿಸ್ ವಜಾ: ಪ್ರತಿಪಕ್ಷಗಳಿಗೆ ಹಿನ್ನಡೆ, ಡೆರೆಕ್ ಒಬ್ರಿಯಾನ್ ಕಿಡಿ

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ವಾಗ್ದಂಡನೆ ನೋಟಿಸ್ ವಜಾ: ಪ್ರತಿಪಕ್ಷಗಳಿಗೆ ಹಿನ್ನಡೆ, ಡೆರೆಕ್ ಒಬ್ರಿಯಾನ್ ಕಿಡಿ

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ಕೋರಿ ಪ್ರತಿಪಕ್ಷಗಳು ನೀಡಿದ್ದ ವಾಗ್ದಂಡನೆ (Impeachment) ನೋಟಿಸ್ ಅನ್ನು ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಸ್ಪೀಕರ್ ತಿರಸ್ಕರಿಸಿದ್ದಾರೆ. ಇದು ಜ್ಞಾನೇಶ್ ಕುಮಾರ್ ವಿರುದ್ಧ ಒಗ್ಗೂಡಿದ್ದ ವಿರೋಧ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ.

ಪ್ರಮುಖ ಅಂಶಗಳು ಏನು ಎನ್ನುವುದನ್ನು ನೋಡುವುದಾದರೆ

ನೋಟಿಸ್ ತಿರಸ್ಕಾರ  : 193 ಸಂಸದರು (ಲೋಕಸಭೆಯ 130 ಮತ್ತು ರಾಜ್ಯಸಭೆಯ 63) ಸಹಿ ಮಾಡಿದ್ದ ಈ ಪ್ರಸ್ತಾವನೆಯನ್ನು ನ್ಯಾಯಾಧೀಶರ (ವಿಚಾರಣೆ) ಕಾಯ್ದೆ, 1968ರ ಸೆಕ್ಷನ್ 3 ರ ಅಡಿಯಲ್ಲಿ ಪರಿಶೀಲಿಸಿ ವಜಾಗೊಳಿಸಲಾಗಿದೆ.

ಐತಿಹಾಸಿಕ ಪ್ರಯತ್ನ  : ಭಾರತದ ಸ್ವಾತಂತ್ರ್ಯದ ನಂತರ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಂಸತ್ತಿನಲ್ಲಿ ನಡೆದ ಮೊದಲ ವಾಗ್ದಂಡನೆ ಪ್ರಯತ್ನ ಇದಾಗಿತ್ತು.

ಪ್ರತಿಪಕ್ಷಗಳು  ಜ್ಞಾನೇಶ್ ಕುಮಾರ್ ವಿರುದ್ಧ ಮುಖ್ಯವಾಗಿ ಏಳು ಗಂಭೀರ ಆರೋಪಗಳನ್ನು ಮಾಡಲಾಗಿತ್ತು 

    ಹುದ್ದೆಯಲ್ಲಿದ್ದಾಗ ಪಕ್ಷಪಾತ ಮತ್ತು ತಾರತಮ್ಯದ ನಡವಳಿಕೆ.

    ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು.

    ಚುನಾವಣಾ ವಂಚನೆ ತನಿಖೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು.

    ಬಿಹಾರದಲ್ಲಿ ಮತದಾರರ ಪಟ್ಟಿ ಮರುಪರಿಶೀಲನೆಯಲ್ಲಿ (SIR) ಅಕ್ರಮದ ಮೂಲಕ ಮತದಾರರನ್ನು  ಹಕ್ಕಿನಿಂದ ವಂಚಿಸಿದ್ದು.

ಸಭಾಪತಿಯವರ ತೀರ್ಪು:

ಈ ನೋಟಿಸ್ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಪ್ರಸ್ತಾವನೆಯನ್ನು ಮುಂದಕ್ಕೆ ಕೊಂಡೊಯ್ಯಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ಸಭಾಪತಿಯವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಇಡೀ ಪ್ರಕ್ರಿಯೆ ಅಲ್ಲಿಗೇ ಸ್ಥಗಿತಗೊಂಡಿದೆ.

ಡೆರೆಕ್ ಒಬ್ರಿಯಾನ್ ಆಕ್ರೋಶ:

ನೋಟಿಸ್ ತಿರಸ್ಕಾರದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಸಂಸದ ಡೆರೆಕ್ ಒಬ್ರಿಯಾನ್ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ:

"ರಾಜ್ಯಸಭಾ ಸಂಸದರು ನೀಡಿದ್ದ ಅರ್ಜಿಯನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗಿದೆ. ಬಿಜೆಪಿ ನಮ್ಮ ಸಂಸತ್ತನ್ನು ಒಂದು ಹಾಸ್ಯದ ವಸ್ತುವನ್ನಾಗಿ ಮಾಡುತ್ತಿದೆ. ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಬಿಜೆಪಿ ಇಂತಹ ಕುತಂತ್ರದ ಹಾದಿ ಹಿಡಿದಿದೆ, ಇದು ನಾಚಿಕೆಗೇಡಿನ ಸಂಗತಿ."

ಮಾರ್ಚ್ 12 ರಂದು ಸಲ್ಲಿಸಲಾಗಿದ್ದ ಈ ಅರ್ಜಿಯನ್ನು ಸಂಸತ್ತಿನ ಅಧಿವೇಶನ ಮುಗಿಯುವವರೆಗೂ ನಿರ್ಲಕ್ಷಿಸಿ, ಈಗ ತಿರಸ್ಕರಿಸಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

RELATED ARTICLES
- Advertisment -
Google search engine

Most Popular