Friday, April 10, 2026
Google search engine

Homeಸ್ಥಳೀಯಮೈಸೂರು ವಿವಿಗೆ ಆಲ್ ಇಂಡಿಯಾ ಸ್ಪರ್ಧೆಗೆ ಪ್ರವೇಶ

ಮೈಸೂರು ವಿವಿಗೆ ಆಲ್ ಇಂಡಿಯಾ ಸ್ಪರ್ಧೆಗೆ ಪ್ರವೇಶ

ಮೈಸೂರು : ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಚಾಂಪಿಯನ್ ಶಿಪ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ತಂಡವು ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನದೊಂದಿಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ  ಸ್ಪರ್ಧೆಗೆ  ಆಯ್ಕೆಯಾಗಿದೆ.

ದಿನಾಂಕ: 31.03.2026 ರಿಂದ 04.04.2026 ರವರೆಗೆ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಯಲ್ಲಿ ಸುಮಾರು 80 ವಿದ್ಯಾನಿಲಯವು ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ತಂಡವು ಲೀಗ್ ಹಂತದ ಪಂದ್ಯಾವಳಿಯಲ್ಲಿ   11-9  ರಿಂದ ಕ್ಯಾಲಿಕಟ್ ವಿಶ್ವವಿದ್ಯಾನಿಲಯ  ತಂಡವನ್ನು ಮಣಿಸಿತು. ಈ ಮೂಲಕ  ಮೈಸೂರು ವಿಶ್ವವಿದ್ಯಾನಿಲಯ ತಂಡ ಮೂರನೇ ಸ್ಥಾನ ಗಳಿಸಿ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಗೆ ಅರ್ಹತೆ ಗಳಿಸಿದೆ.  ತಂಡದ ನಾಯಕಿಯಾಗಿ ನಾಗಲಾಂಬಿಕ ತಂಡದ ವ್ಯವಸ್ಥಾಪಕರಾಗಿ ಮಹಾರಾಣಿ ಮಹಿಳಾ ಕಲಾ ಕಾಲೇಜು, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಭಾಸ್ಕರ್ ಕೆ ಎಸ್ ಹಾಗೂ  ತರಬೇತುದಾರರಾಗಿ ಕಾಂತರಾಜು ಬಿ.ಡಿ ಕಾರ್ಯನಿರ್ವಹಿಸಿದರು.

ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಯು ಎಸ್.ಎನ್.ಡಿ.ಟಿ ಮಹಿಳಾ ವಿಶ್ವವಿದ್ಯಾನಿಲಯ, ಮುಂಬೈನಲ್ಲಿ ದಿನಾಂಕ:19.04.2026 ರಿಂದ 23.04.2026 ರವರೆಗೆ ನಡೆಯಲಿದ್ದು ಸ್ಪರ್ಧೆಯಲ್ಲಿ ಮೈಸೂರು ವಿವಿ  ತಂಡ ಭಾಗವಹಿಸಲಿದೆ.

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಈ ವಿಜೇತ ತಂಡವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್ ಕೆ ಲೋಕನಾಥ್, ಕುಲಸಚಿವರಾದ ಸವಿತ ಎಂ ಕೆ ಹಾಗೂ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕಪ್ರೊ. ಹೆಚ್ ಸಿ ರೇವಣ್ಣ ಸಿದ್ದಪ್ಪ ಅವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

RELATED ARTICLES
- Advertisment -
Google search engine

Most Popular