Saturday, April 11, 2026
Google search engine

Homeಸಿನಿಮಾಬಾಕ್ಸ್ ಆಫೀಸ್‌ ನಲ್ಲಿ 'ಡಕಾಯತ್' ಅಬ್ಬರ : 'ಧುರಂಧರ್ 2' ಹಿಂದಿಕ್ಕಿದ ಆದಿವಿ ಸೇಷ್-ಮೃಣಾಲ್ ಜೋಡಿ!

ಬಾಕ್ಸ್ ಆಫೀಸ್‌ ನಲ್ಲಿ ‘ಡಕಾಯತ್’ ಅಬ್ಬರ : ‘ಧುರಂಧರ್ 2’ ಹಿಂದಿಕ್ಕಿದ ಆದಿವಿ ಸೇಷ್-ಮೃಣಾಲ್ ಜೋಡಿ!

ಬೆಂಗಳೂರು : ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಡಕಾಯತ್’ ಶುಕ್ರವಾರ ಅದ್ಧೂರಿಯಾಗಿ ತೆರೆಕಂಡಿದೆ. ಸ್ಯಾಂಡಲ್‌ ವುಡ್ ಮತ್ತು ಬಾಲಿವುಡ್‌ ನ ದೊಡ್ಡ ಚಿತ್ರಗಳ ಪೈಪೋಟಿಯ ನಡುವೆಯೂ ಆದಿವಿ ಸೇಷ್ ಮತ್ತು ಮೃಣಾಲ್ ಠಾಕೂರ್ ನಟನೆಯ ಈ ಚಿತ್ರವು ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಮೊದಲ ದಿನದ ಕಲೆಕ್ಷನ್ ಎಷ್ಟು?

ವರದಿಗಳ ಪ್ರಕಾರ ‘ಡಕಾಯತ್’ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ.
ಬಾಕ್ಸ್ ಆಫೀಸ್ ಗಳಿಕೆ : ರಾತ್ರಿ 10:30ರ ವೇಳೆಗೆ ಚಿತ್ರವು ಸುಮಾರು ₹5.10 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂಕಿಅಂಶಗಳು ತಿಳಿಸಿವೆ.

ಆಕ್ಯುಪೆನ್ಸಿ (Occupancy): ಚಿತ್ರಮಂದಿರಗಳಲ್ಲಿ ಶೇ. 25.9 ರಷ್ಟು ಆಕ್ಯುಪೆನ್ಸಿ ದಾಖಲಾಗುವ ಮೂಲಕ ಚಿತ್ರವು ಭದ್ರವಾದ ಅಡಿಪಾಯ ಹಾಕಿದೆ.

‘ಧುರಂಧರ್ 2’ಗೆ ಟಕ್ಕರ್ ಕೊಟ್ಟ ‘ಡಕಾಯತ್’

ವಿಶೇಷವೆಂದರೆ, ರಣವೀರ್ ಸಿಂಗ್ ಅಭಿನಯದ ಬ್ಲಾಕ್‌ ಬಸ್ಟರ್ ಸಿನಿಮಾ ‘ಧುರಂಧರ್ 2’ ಚಿತ್ರದ ಆಕ್ಯುಪೆನ್ಸಿಗಿಂತಲೂ ‘ಡಕಾಯತ್’ ಹೆಚ್ಚಿನ ಪ್ರದರ್ಶನ ಕಂಡಿದೆ. 23ನೇ ದಿನದಲ್ಲೂ ಅಬ್ಬರಿಸುತ್ತಿರುವ ‘ಧುರಂಧರ್ 2’ ನಾಲ್ಕನೇ ಶುಕ್ರವಾರ ಶೇ. 9.2 ರಷ್ಟು ಆಕ್ಯುಪೆನ್ಸಿ ಹೊಂದಿದ್ದರೆ, ‘ಡಕಾಯತ್’ ಶೇ. 25ಕ್ಕೂ ಅಧಿಕ ಆಕ್ಯುಪೆನ್ಸಿ ಪಡೆಯುವ ಮೂಲಕ ಹೊಸ ಅಲೆ ಸೃಷ್ಟಿಸಿದೆ.

ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ

ಶಾನಿಲ್ ದೇವ್ ನಿರ್ದೇಶನದ ಈ ಚಿತ್ರವು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕೇವಲ ಆದಿವಿ ಸೇಷ್ ಮತ್ತು ಮೃಣಾಲ್ ಮಾತ್ರವಲ್ಲದೆ, ಅನುರಾಗ್ ಕಶ್ಯಪ್, ಪ್ರಕಾಶ್ ರಾಜ್, ಅತುಲ್ ಕುಲಕರ್ಣಿ ಮತ್ತು ಸುನೀಲ್ ಅವರಂತಹ ಘಟಾನುಘಟಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ಮಾಣ: ಅನ್ನಪೂರ್ಣ ಸ್ಟುಡಿಯೋಸ್ (ಸುಪ್ರಿಯಾ ಯಾರ್ಲಗಡ್ಡ), ಸಂಗೀತ: ಭೀಮ್ಸ್ ಸಿಸಿರೋಲಿಯೊ,
ಛಾಯಾಗ್ರಹಣ: ಧನುಷ್ ಭಾಸ್ಕರ್

ಏನಿದು ‘ಡಕಾಯತ್’ ಕಥೆ?

ಇದು ಹರಿ (ಆದಿವಿ ಸೇಷ್) ಮತ್ತು ಸರಸ್ವತಿ ಅಲಿಯಾಸ್ ಜೂಲಿಯೆಟ್ (ಮೃಣಾಲ್ ಠಾಕೂರ್) ಎಂಬ ಪ್ರೇಮಿಗಳ ಕಥೆ.

ಜೂಲಿಯೆಟ್ ಮಾಡಿದ ಒಂದು ದ್ರೋಹದಿಂದಾಗಿ ಹರಿ 13 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುತ್ತಾನೆ. ಸೇಡು ತೀರಿಸಿಕೊಳ್ಳಲು ಜೈಲಿನಿಂದ ತಪ್ಪಿಸಿಕೊಳ್ಳುವ ಹರಿ, ಪ್ರಕಾಶ್ ರಾಜ್ ಅವರ ಕರುಣಾ ಆಸ್ಪತ್ರೆಯಲ್ಲಿ ದರೋಡೆ ಮಾಡಲು ಪ್ಲಾನ್ ಮಾಡುತ್ತಾನೆ. ಈ ದರೋಡೆಯಲ್ಲಿ ಜೂಲಿಯೆಟ್ ಕೂಡ ಅನಿವಾರ್ಯವಾಗಿ ಸಿಲುಕಿಕೊಳ್ಳುವಂತೆ ಹರಿ ಸಂಚು ರೂಪಿಸುತ್ತಾನೆ. ಇಲ್ಲಿಂದ ಸಿನಿಮಾ ಹಲವಾರು ಟ್ವಿಸ್ಟ್ ಅಂಡ್ ಟರ್ನ್ಸ್‌ಗಳೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ.

ಒಟ್ಟಾರೆಯಾಗಿ ಈ ವಾರಾಂತ್ಯದಲ್ಲಿ ‘ಡಕಾಯತ್’ ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆಯಿದೆ.

RELATED ARTICLES
- Advertisment -
Google search engine

Most Popular