ಅಹಮದಾಬಾದ್ : ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಿಲಕ್ ವರ್ಮಾ ತಮ್ಮ ಚೊಚ್ಚಲ ಐಪಿಎಲ್ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇನಿಂಗ್ಸ್ ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ತಮ್ಮ ಶತಕ ಪೂರೈಸಿದರು.
ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನ ಪ್ರಮುಖಾಂಶ
ರನ್: 101* (ನಾಟೌಟ್), ಎಸೆತಗಳು: 45, ಬೌಂಡರಿ/ಸಿಕ್ಸರ್: 8 ಬೌಂಡರಿ ಮತ್ತು 7 ಸಿಕ್ಸರ್,
ಸ್ಟ್ರೈಕ್ ರೇಟ್: 224.44
ಬರೆದ ದಾಖಲೆಗಳು ಒಂದೆರಡಲ್ಲ:
ಮುಂಬೈ ಇಂಡಿಯನ್ಸ್ ಪರ ಅತಿ ವೇಗದ ಶತಕ : ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ತಿಲಕ್ ವರ್ಮಾ, ಸನತ್ ಜಯಸೂರ್ಯ ಅವರ ದಾಖಲೆಯನ್ನು (2008ರಲ್ಲಿ ಸಿಎಸ್ ಕೆ ವಿರುದ್ಧ 45 ಎಸೆತಗಳಲ್ಲಿ ಶತಕ) ಸರಿಗಟ್ಟಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಸೇರಿದಂತೆ ಹಲವು ದಿಗ್ಗಜರನ್ನು ಹಿಂದಿಕ್ಕಿದ್ದಾರೆ.
IPL 2026ರ ವೇಗದ ಶತಕ: ಈ ಸೀಸನ್‌ನಲ್ಲಿ ಸಂಜು ಸ್ಯಾಮ್ಸನ್ (52 ಎಸೆತ) ಸಿಡಿಸಿದ್ದ ಶತಕವೇ ವೇಗವಾಗಿತ್ತು, ಈಗ ತಿಲಕ್ ಅದನ್ನು ಮೀರಿಸಿದ್ದಾರೆ.
ಅದ್ಭುತ ಚೇತರಿಕೆ: ಒಂದು ಹಂತದಲ್ಲಿ ತಿಲಕ್ 22 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ದರು. ಆದರೆ ನಂತರದ 23 ಎಸೆತಗಳಲ್ಲಿ ಭರ್ಜರಿ 82 ರನ್ ಚಚ್ಚುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದರು.
5ನೇ ಕ್ರಮಾಂಕದ ಸಾಧನೆ: ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸುವುದು ಐಪಿಎಲ್‌ನಲ್ಲಿ ಅಪರೂಪದ ಸಾಧನೆಯಾಗಿದೆ.
ಪಂದ್ಯದ ಫಲಿತಾಂಶ ಹೀಗಿದೆ:
ತಿಲಕ್ ವರ್ಮಾ ಅವರ ಅಬ್ಬರದ ಆಟದಿಂದ ಮುಂಬೈ ಇಂಡಿಯನ್ಸ್ 199 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ ತಂಡ ಕೇವಲ 100 ರನ್‌ಗಳಿಗೆ ಆಲೌಟ್ ಆಗುವ ಮೂಲಕ 99 ರನ್‌ಗಳ ಬೃಹತ್ ಸೋಲನುಭವಿಸಿತು.
ಬೌಲಿಂಗ್ ಮಿಂಚು: ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಶ್ವನಿ ಕುಮಾರ್ 24 ರನ್ ನೀಡಿ 4 ವಿಕೆಟ್ ಪಡೆದರೆ, ಜಸ್ಪ್ರಿತ್ ಬುಮ್ರಾ ಈ ಸೀಸನ್‌ನ ತಮ್ಮ ಮೊದಲ ವಿಕೆಟ್ ಪಡೆದು ಮಿಂಚಿದರು.
ತಿಲಕ್ ವರ್ಮಾ ಐಪಿಎಲ್ ವೃತ್ತಿಜೀವನ:
2022 ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ತಿಲಕ್ ವರ್ಮಾ, ಇದುವರೆಗೆ 60 ಪಂದ್ಯಗಳಲ್ಲಿ 1643 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 8 ಅರ್ಧಶತಕಗಳು ಸೇರಿವೆ. (ಏಜೆನ್ಸಿಸ್)



