ಬೆಂಗಳೂರು : ಜಿಬಿಎ ಚುನಾವಣೆಗೆ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಟೀಕಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ ಡಿಕೆಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ ಪಾಪ ಅವರ ಶಾಸಕರನ್ನು ಕೇಳಲಿ. ಜೆಡಿಎಸ್ ಶಾಸಕರು ಕಮಿಟಿಯಲ್ಲಿ ಇದ್ದರು. ಅವರ ಜತೆ ಮಾತಾಡಿದ್ದೇವೆ. ಬಿಜೆಪಿ ಶಾಸಕರ ಜೊತೆಗೂ ಚರ್ಚೆ ಮಾಡಿದ್ದೇವೆ ಹೆಚ್ ಡಿಕೆ ಬಹಳ ದೊಡ್ಡ ವ್ಯಕ್ತಿ ಇರಬಹುದು. ಅದರೆ ನನಗೆ ಸಣ್ಣ ಪುಟ್ಟ ಅನುಭವವಿದೆ. ವಿಪಕ್ಷ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಗೊತ್ತಿದೆ ಎಂದು ತಿರುಗೇಟು ನೀಡಿದರು.
ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಅಭಾವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ನೀರಿನ ಅಭಾವ ಹಿನ್ನೆಲೆ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ ಅಂತರ್ಜಲ ಬಗ್ಗೆ ಬಿಡಬ್ಲ್ಯು ಎಸ್ ಎಸ್ ಬಿ ಅಧಿಕಾರಿಗಳು ಜೊತೆ ಸಭೆ ಮಾಡಿದ್ದೇವೆ. ಏನೇ ಸಮಸ್ಯೆ ಬಂದರೂ ನಾವು ಎದುರಿಸುತ್ತೇವೆ ಎಂದು ನುಡಿದರು.



