Wednesday, May 20, 2026
Google search engine

Homeರಾಜ್ಯಬಾಗಲಕೋಟೆಯಲ್ಲಿ ಲೋಕಾಯುಕ್ತರ ದಾಳಿ : ಅಕ್ರಮ ಮರಳು ಮಾಫಿಯಾಗೆ ಶಾಕ್

ಬಾಗಲಕೋಟೆಯಲ್ಲಿ ಲೋಕಾಯುಕ್ತರ ದಾಳಿ : ಅಕ್ರಮ ಮರಳು ಮಾಫಿಯಾಗೆ ಶಾಕ್

ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಲೋಕಾಯುಕ್ತ ಅಧಿಕಾರಿಗಳು ಭಾರೀ ಹೊಡೆತ ನೀಡಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನದಿಪಾತ್ರಗಳನ್ನು ಅಕ್ರಮವಾಗಿ ಕೊರೆದು ಮರಳು ಸಾಗಾಟ ನಡೆಸುತ್ತಿದ್ದ ಕೇಂದ್ರಗಳ ಮೇಲೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ಜಪ್ತಿ ಮಾಡಿದ್ದಾರೆ.

ಕೆಲವು ದಿನಗಳಿಂದ ಮರಳು ಮಾಫಿಯಾ ಚಟುವಟಿಕೆಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿದ್ದ ಲೋಕಾಯುಕ್ತ ತಂಡ, ಯಾವುದೇ ಸುಳಿವು ಸಿಗದಂತೆ ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆ ರೂಪಿಸಿದ್ದು, ಅದರಂತೆ ಮುಧೋಳ, ಇಳಕಲ್, ಹುನಗುಂದ ಸೇರಿದಂತೆ ಹಲವು ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಂಧೆಕೋರರಲ್ಲಿ ಆತಂಕ ಸೃಷ್ಟಿಸಿದೆ.

ಮುಧೋಳ ತಾಲೂಕಿನ ಜೀರಾಗಳ ಗ್ರಾಮದ ಸಮೀಪ ಹರಿಯುವ ಘಟಪ್ರಭಾ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅಬ್ಬರದಿಂದ ನಡೆಯುತ್ತಿತ್ತು. ಹಗಲು-ರಾತ್ರಿ ಎನ್ನದೆ ಯಂತ್ರೋಪಕರಣಗಳ ಸಹಾಯದಿಂದ ನದಿಪಾತ್ರದಿಂದ ಮರಳು ಎತ್ತಲಾಗುತ್ತಿದ್ದು, ಜೀರಾಗಳ ಗ್ರಾಮವೇ ಈ ದಂಧೆಯ ಪ್ರಮುಖ ಕೇಂದ್ರವಾಗಿತ್ತು ಎಂಬುದು ದಾಳಿಯ ವೇಳೆ ಬಹಿರಂಗವಾಗಿದೆ.

ಇನ್ನು ಕಾರ್ಯಾಚರಣೆಯ ಸಂದರ್ಭದಲ್ಲಿ ಅಕ್ರಮ ಮರಳು ತೆಗೆಯಲು ಬಳಸಲಾಗುತ್ತಿದ್ದ ಯಾಂತ್ರೀಕೃತ ಬೋಟ್‌ಗಳು ಹಾಗೂ ಮರಳು ಸಾಗಾಟಕ್ಕೆ ಸಿದ್ಧವಾಗಿದ್ದ ಅನೇಕ ಟಿಪ್ಪರ್ ವಾಹನಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅಲ್ಲದೆ ಜಪ್ತಿ ಮಾಡಲಾದ ವಾಹನಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಈ ಮಹತ್ವದ ಕಾರ್ಯಾಚರಣೆ ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಮಾನಿಂಗ ದೇಸಾಯಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಈ ಅಕ್ರಮ ದಂಧೆಯ ಹಿಂದೆ ಇರುವ ಪ್ರಮುಖ ವ್ಯಕ್ತಿಗಳು ಯಾರು ಹಾಗೂ ಸ್ಥಳೀಯ ಅಧಿಕಾರಿಗಳ ಸಹಕಾರ ಇದೆಯೇ ಎಂಬ ಬಗ್ಗೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಲೋಕಾಯುಕ್ತರ ಈ ದಿಢೀರ್ ದಾಳಿಯಿಂದ ಜಿಲ್ಲೆಯ ಮರಳು ದಂಧೆಕೋರರಲ್ಲಿ ಭಾರೀ ತಲ್ಲಣ ಉಂಟಾಗಿದೆ.

RELATED ARTICLES
- Advertisment -
Google search engine

Most Popular