Tuesday, May 26, 2026
Google search engine

Homeಕ್ರೀಡೆಅತಿ ಹೆಚ್ಚು ಬೌಂಡರಿ ಬಾರಿಸಿದವರಲ್ಲಿ ನಂ.1 ಸ್ಥಾನದ ಹತ್ತಿರ ವಿರಾಟ್ ಕೊಹ್ಲಿ : ಟಾಪ್-5 ನಲ್ಲಿಲ್ಲ...

ಅತಿ ಹೆಚ್ಚು ಬೌಂಡರಿ ಬಾರಿಸಿದವರಲ್ಲಿ ನಂ.1 ಸ್ಥಾನದ ಹತ್ತಿರ ವಿರಾಟ್ ಕೊಹ್ಲಿ : ಟಾಪ್-5 ನಲ್ಲಿಲ್ಲ ವೈಭವ್ ಸೂರ್ಯವಂಶಿ!

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್‌ ನ (IPL 2026) 19ನೇ ಆವೃತ್ತಿಯ ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮುಕ್ತಾಯಗೊಂಡಿವೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT), ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಪ್ರಶಸ್ತಿಯ ರೇಸ್‌ನಲ್ಲಿ ಉಳಿದುಕೊಂಡಿದ್ದು, ಉಳಿದ 6 ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಪ್ಲೇಆಫ್ ಪಂದ್ಯಗಳು ಆರಂಭವಾಗುವ ಮುನ್ನ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಫೋರ್ (ಬೌಂಡರಿ) ಬಾರಿಸಿದ ಟಾಪ್-5 ಆಟಗಾರರು ಯಾರು ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶೇಷವೆಂದರೆ, ಈ ಬಾರಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಟಾಪ್-5 ಬ್ಯಾಟರ್‌ಗಳಲ್ಲಿ ಒಬ್ಬರೇ ಒಬ್ಬರು ವಿದೇಶಿ ಆಟಗಾರರಿಲ್ಲ, ಐದೂ ಜನ ಭಾರತೀಯರೇ ಆಗಿದ್ದಾರೆ! ವಿದೇಶಿ ಆಟಗಾರರ ಪೈಕಿ ಮಿಚೆಲ್ ಮಾರ್ಷ್ 13 ಇನಿಂಗ್ಸ್‌ ಗಳಲ್ಲಿ 51 ಫೋರ್‌ಗಳೊಂದಿಗೆ ಒಟ್ಟಾರೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಫೋರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳು

ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್)

ಲೀಗ್ ಹಂತದ ಮುಕ್ತಾಯಕ್ಕೆ ಅತಿ ಹೆಚ್ಚು ಬೌಂಡರಿ ಬಾರಿಸಿದವರ ಪಟ್ಟಿಯಲ್ಲಿ ಗುಜರಾತ್‌ನ ಓಪನರ್ ಸಾಯಿ ಸುದರ್ಶನ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 14 ಇನಿಂಗ್ಸ್‌ಗಳಿಂದ 62 ಫೋರ್ ಮತ್ತು 29 ಸಿಕ್ಸರ್ ಸಿಡಿಸಿದ್ದಾರೆ. ಈ ಸೀಸನ್‌ನಲ್ಲಿ 1 ಶತಕ ಹಾಗೂ 7 ಅರ್ಧಶತಕಗಳೊಂದಿಗೆ ಒಟ್ಟು 638 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 14 ಇನಿಂಗ್ಸ್‌ಗಳಲ್ಲಿ 59 ಫೋರ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಾಯಿ ಸುದರ್ಶನ್ ಅವರಿಗಿಂತ ಕೊಹ್ಲಿ ಕೇವಲ 3 ಬೌಂಡರಿಗಳಷ್ಟೇ ಹಿಂದಿದ್ದಾರೆ. ಮಂಗಳವಾರ ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ (RCB vs GT) ಈ ಇಬ್ಬರೂ ಆಟಗಾರರು ಮುಖಾಮುಖಿಯಾಗುತ್ತಿದ್ದಾರೆ. ಕೊಹ್ಲಿ ಈ ಸೀಸನ್‌ನಲ್ಲಿ 1 ಶತಕ ಮತ್ತು 4 ಅರ್ಧಶತಕಗಳ ನೆರವಿನಿಂದ 557 ರನ್ ಬಾರಿಸಿದ್ದಾರೆ.

ಶುಭ್‌ಮನ್ ಗಿಲ್ (ಗುಜರಾತ್ ಟೈಟಾನ್ಸ್)

ಗುಜರಾತ್ ತಂಡದ ನಾಯಕ ಶುಭ್‌ಮನ್ ಗಿಲ್ 13 ಇನಿಂಗ್ಸ್‌ಗಳಲ್ಲಿ 57 ಫೋರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಗಿಲ್ 6 ಅರ್ಧಶತಕಗಳೊಂದಿಗೆ ಒಟ್ಟು 616 ರನ್ ಗಳಿಸಿದ್ದಾರೆ.

ಇಶಾನ್ ಕಿಶನ್ (ಸನ್‌ರೈಸರ್ಸ್ ಹೈದರಾಬಾದ್)

ಹೈದರಾಬಾದ್ ತಂಡದ ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡ 14 ಇನಿಂಗ್ಸ್‌ಗಳಲ್ಲಿ 57 ಫೋರ್ ಬಾರಿಸುವ ಮೂಲಕ ಗಿಲ್ ಅವರೊಂದಿಗೆ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಇಶಾನ್ ಈ ಬಾರಿ 6 ಅರ್ಧಶತಕಗಳ ನೆರವಿನಿಂದ 569 ರನ್ ಗಳಿಸಿದ್ದಾರೆ.

ಕೆ.ಎಲ್. ರಾಹುಲ್ (ಡೆಲ್ಲಿ ಕ್ಯಾಪಿಟಲ್ಸ್)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್‌ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್ 14 ಇನಿಂಗ್ಸ್‌ಗಳಲ್ಲಿ 56 ಫೋರ್ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ. ಆದರೆ, ಇವರ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ರಾಹುಲ್ ಈ ಸೀಸನ್‌ನಲ್ಲಿ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 593 ರನ್ ಕಲೆಹಾಕಿದ್ದಾರೆ.

ಹಾಗಾದರೆ ವೈಭವ್ ಸೂರ್ಯವಂಶಿ ಎಷ್ಟನೇ ಸ್ಥಾನದಲ್ಲಿದ್ದಾರೆ?

ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅತಿ ಹೆಚ್ಚು ಫೋರ್ ಬಾರಿಸಿದವರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅವರು 14 ಇನಿಂಗ್ಸ್‌ ಗಳಲ್ಲಿ 50 ಫೋರ್ ಬಾರಿಸಿದ್ದಾರೆ.

ಸಿಕ್ಸರ್‌ ಗಳ ಸುನಾಮಿ: ಫೋರ್‌ಗಳಿಗಿಂತ ವೈಭವ್ ಸಿಕ್ಸರ್‌ಗಳನ್ನೇ ಹೆಚ್ಚಾಗಿ ಸಿಡಿಸಿದ್ದಾರೆ! ಈ ಸೀಸನ್‌ನಲ್ಲಿ ಬರೋಬ್ಬರಿ 53 ಸಿಕ್ಸರ್ ಬಾರಿಸುವ ಮೂಲಕ, ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಚಚ್ಚಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕ್ರಿಸ್ ಗೇಲ್ ದಾಖಲೆ ಮುರಿಯಲು 7 ಸಿಕ್ಸರ್ ಬಾಕಿ

ಐಪಿಎಲ್ ಇತಿಹಾಸದಲ್ಲಿ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹೆಸರಲ್ಲಿದೆ (2012 ರಲ್ಲಿ 59 ಸಿಕ್ಸರ್). ಈ ಐತಿಹಾಸಿಕ ದಾಖಲೆಯನ್ನು ಮುರಿಯಲು ವೈಭವ್‌ ಗೆ ಇನ್ನು ಕೇವಲ 7 ಸಿಕ್ಸರ್‌ ಗಳ ಅಗತ್ಯವಿದೆ. ವೈಭವ್ ಸೂರ್ಯವಂಶಿ ಈ ವರ್ಷ 14 ಪಂದ್ಯಗಳಿಂದ 1 ಶತಕ ಮತ್ತು 3 ಅರ್ಧಶತಕಗಳೊಂದಿಗೆ ಒಟ್ಟು 583 ರನ್ ಬಾರಿಸಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular