ಚೆನ್ನೈ : ಕಾಲಿವುಡ್ ಸ್ಟಾರ್ ನಟ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ಇತ್ತೀಚಿನ ಚಿತ್ರ ‘ಕರುಪ್ಪು’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಸತತವಾಗಿ ಹೊಸ ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಎರಡು ವಾರಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಕೇವಲ ಬಂಪರ್ ಕಮಾಯಿ ಮಾಡುವುದಷ್ಟೇ ಅಲ್ಲದೆ, ಹಲವು ದೊಡ್ಡ ಸಿನಿಮಾಗಳ ದಾಖಲೆಯನ್ನು ಧೂಳೀಪಟ ಮಾಡಿದೆ.
ಈಗ ಈ ಸಿನಿಮಾ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ‘ಎಂಧಿರನ್’ (ರೋಬೋ) ಚಿತ್ರದ ಭಾರತದ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ. ಹಾಗಾದರೆ ‘ಕರುಪ್ಪು’ ಚಿತ್ರದ 14 ದಿನಗಳ ಒಟ್ಟು ಗಳಿಕೆ ಎಷ್ಟು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
14ನೇ ದಿನ ‘ಕರುಪ್ಪು’ ಗಳಿಸಿದ್ದೆಷ್ಟು?
ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಚಿತ್ರವನ್ನು ಹೊರತುಪಡಿಸಿದರೆ ‘ಕರುಪ್ಪು’ ಚಿತ್ರಕ್ಕೆ ಬೇರೆ ಯಾವುದೇ ಸಿನಿಮಾ ದೊಡ್ಡ ಪೈಪೋಟಿ ನೀಡುತ್ತಿಲ್ಲ. ಮತ್ತೊಂದೆಡೆ ಬಿಡುಗಡೆಯಾಗಿದ್ದ ‘ಕಾರಾ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಂಪೂರ್ಣ ಸೋತಿದೆ. ಹೀಗಾಗಿ ಸೂರ್ಯ ನಟನೆಯ ಈ ಹೊಸ ಸಿನಿಮಾ ಟಿಕೆಟ್ ವಿಂಡೋದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು, ಕೋಟಿ ಕೋಟಿ ಲೂಟಿ ಮಾಡುತ್ತಿದೆ.
ಮೊದಲ ವಾರದಲ್ಲಿ ಅಬ್ಬರಿಸಿದ್ದ ಈ ಸಿನಿಮಾ, ಎರಡನೇ ವಾರದಲ್ಲೂ ಅದೇ ವೇಗವನ್ನು ಕಾಯ್ದುಕೊಂಡಿದೆ. ಬಿಡುಗಡೆಯಾದ 14ನೇ ದಿನ (ಎರಡನೇ ಗುರುವಾರ) ಚಿತ್ರದ ಗಳಿಕೆಯಲ್ಲಿ ಭಾರಿ ಜಂಪ್ ಕಂಡುಬಂದಿದೆ. ಸ್ಯಾಕಿನಿಲ್ಕ್ (Sacnilk) ಆರಂಭಿಕ ವರದಿಯ ಪ್ರಕಾರ, 14ನೇ ದಿನ ‘ಕರುಪ್ಪು’ ಸಿನಿಮಾ 3,881 ಶೋಗಳಿಂದ ಒಟ್ಟು 4.95 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.
ಇದರೊಂದಿಗೆ ಭಾರತದಲ್ಲಿ ಚಿತ್ರದ 14 ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ
ಒಟ್ಟು ನೆಟ್ ಕಲೆಕ್ಷನ್: 168.15 ಕೋಟಿ ರೂ.ಒಟ್ಟು ಗ್ರಾಸ್ ಕಲೆಕ್ಷನ್: 194.55 ಕೋಟಿ ರೂ.,
ವಿಶ್ವಾದ್ಯಂತ (Worldwide) ‘ಕರುಪ್ಪು’ ಭರ್ಜರಿ ಬೇಟೆ
ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಈ ಸಿನಿಮಾ ಬಾಕ್ಸ್ ಆಫೀಸ್ ಸುನಾಮಿ ಸೃಷ್ಟಿಸಿದೆ. 14ನೇ ದಿನ ವಿದೇಶಿ ಮಾರುಕಟ್ಟೆಯಿಂದ ಸಿನಿಮಾ 1.25 ಕೋಟಿ ರೂ. ಬಾಚಿಕೊಂಡಿದೆ.
ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್: 72.50 ಕೋಟಿ ರೂ.,ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ (Worldwide Gross): 267.05 ಕೋಟಿ ರೂ.
ರಜನಿಕಾಂತ್ ಅವರ ‘ಎಂಧಿರನ್’ ದಾಖಲೆ ಬ್ರೇಕ್!
‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಾ ಸಾಲು ಸಾಲು ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ. ಇತ್ತೀಚೆಗಷ್ಟೇ ರಜನಿಕಾಂತ್ ಅವರ ‘ಕಬಾಲಿ’ ಚಿತ್ರದ ಭಾರತದ ಲೈಫ್‌ಟೈಮ್ ಕಲೆಕ್ಷನ್ (150.12 ಕೋಟಿ ರೂ.) ದಾಖಲೆಯನ್ನು ಇದು ಮುರಿದಿತ್ತು. ಈಗ ಈ ಆಕ್ಷನ್ ಡ್ರಾಮಾ ಸಿನಿಮಾ, 2010ರಲ್ಲಿ ಬಿಡುಗಡೆಯಾಗಿ ಭಾರತದಲ್ಲಿ 165 ಕೋಟಿ ರೂ. ಗಳಿಸಿದ್ದ ರಜನಿಕಾಂತ್ ಅವರದೇ ‘ಎಂಧಿರನ್’ (ಯenthiran) ಚಿತ್ರದ ದಾಖಲೆಯನ್ನು ಉಡೀಸ್ ಮಾಡಿದೆ.
ಟಾಪ್ 10 ಲಿಸ್ಟ್ ಮೇಲೆ ಸೂರ್ಯ ಕಣ್ಣು
ಭಾರತದಲ್ಲಿ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾಗಳ ‘ಟಾಪ್ 10’ ಪಟ್ಟಿಗೆ ಸೇರಲು ಸೂರ್ಯ ಈಗ ಸಜ್ಜಾಗಿದ್ದಾರೆ. ಈ ಮೈಲಿಗಲ್ಲು ತಲುಪಲು ‘ಕರುಪ್ಪು’ ಸಿನಿಮಾ ದಳಪತಿ ವಿಜಯ್ ನಟನೆಯ ‘ವಾರಿಸು’ (178.14 ಕೋಟಿ ರೂ.) ಚಿತ್ರದ ದಾಖಲೆಯನ್ನು ಮುರಿಯಬೇಕಾಗಿದೆ. ಸಿನಿಮಾ ಸಾಗುತ್ತಿರುವ ವೇಗವನ್ನು ನೋಡಿದರೆ, 3ನೇ ವೀಕೆಂಡ್‌ನಲ್ಲಿ (ಶನಿವಾರ-ಭಾನುವಾರ) ಈ ಸಾಧನೆ ಮಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. (ಏಜೆನ್ಸಿಸ್)



