Friday, May 29, 2026
Google search engine

Homeರಾಜಕೀಯಕಾಂಗ್ರೆಸ್‌ಗೆ ಕರ್ನಾಟಕ ಎಟಿಎಂ : ಬಿಜೆಪಿ ಬಂದರೆ ಮಾತ್ರ ಲೂಟಿ ಅಂತ್ಯ : ಲಹರ್ ಸಿಂಗ್...

ಕಾಂಗ್ರೆಸ್‌ಗೆ ಕರ್ನಾಟಕ ಎಟಿಎಂ : ಬಿಜೆಪಿ ಬಂದರೆ ಮಾತ್ರ ಲೂಟಿ ಅಂತ್ಯ : ಲಹರ್ ಸಿಂಗ್ ಸಿರೋಯಾ

ನವದೆಹಲಿ : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಾಗ್ದಾಳಿ ಮುಂದುರದೆದಿದ್ದು, ಸಿದ್ದು ರಾಜಿನಾಮೆಯಿಂದ ಜನತೆಗೇನೂ ಆಗ್ಬೇಕಿಲ್ಲ..ಕಾಂಗ್ರೆಸ್ ಗೆ ಕರ್ನಾಟಕ ATM ಆಗ್ಬಿಟ್ಟಿದೆ ಎಂದು ಬಿಜೆಪಿ ನಾಯಕ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ಕರ್ನಾಟಕ ಕಾಂಗ್ರೆಸ್ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಲಹರ್ ಸಿಂಗ್, “ಅವರ ರಾಜೀನಾಮೆಯಿಂದ ಸಾರ್ವಜನಿಕರಿಗೆ ಯಾವುದೇ ಲಾಭವಾಗುವುದಿಲ್ಲ” ಎಂದು ಕಿಡಿಕಾರಿದ್ದಾರೆ.

“ಭ್ರಷ್ಟಾಚಾರ ಹೊರತುಪಡಿಸಿ, ಸಿದ್ದರಾಮಯ್ಯ ವಂಶಪಾರಂಪರ್ಯ ರಾಜಕಾರಣ, ಜಾತಿವಾದ, ಸಮುದಾಯವಾದ ಮತ್ತು ನಕ್ಸಲಿಸಂಗೆ ಉತ್ತೇಜನ ನೀಡುವವರಾಗಿ ಸಿದ್ದರಾಮಯ್ಯ ಪರಿಚಿತರಾಗಿದ್ದಾರೆ. ಹೊಸ ಮುಖ್ಯಮಂತ್ರಿ ಆಗಲಿರುವ ಡಿಕೆ ಶಿವಕುಮಾರ್ ಕೂಡ ಭ್ರಷ್ಟಾಚಾರದಿಂದ ದೂರ ಉಳಿಯುತ್ತಾರೆ ಎಂಬ ನಿರೀಕ್ಷೆ ನನಗಿಲ್ಲ. ಅವರಿಗೆ ಬೇರೆ ಆಯ್ಕೆಯೇ ಇಲ್ಲ ಎಂದರು.

ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ಶುಭಾಶಯ ತಿಳಿಸಿದ ಸಿರೋಯಾ, “ನನಗೆ ಹೆಚ್ಚು ನಿರೀಕ್ಷೆ ಇಲ್ಲದಿದ್ದರೂ, ಗಾಂಧಿ ಕುಟುಂಬದ ಒತ್ತಡಕ್ಕೆ ಮಣಿಯದೇ ಕರ್ನಾಟಕದ ಜನರ ಹಿತಾಸಕ್ತಿಗಾಗಿ ಅವರು ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಅದು ಅವರ ರಾಜಕೀಯ ಭವಿಷ್ಯಕ್ಕೂ ಒಳ್ಳೆಯದು, ಏಕೆಂದರೆ ಅದು ಅವರ ರಾಜಕೀಯ ಭವಿಷ್ಯಕ್ಕೂ ಪ್ರಯೋಜನಕಾರಿಯಾಗಿದೆ” ಎಂದರು.

ಸಿದ್ದರಾಮಯ್ಯ ತಮ್ಮ ಮೇಲಿನ ಹೊಣೆಗಾರಿಕೆಯನ್ನು ಬಹಳ ಚಾತುರ್ಯದಿಂದ ರಾಹುಲ್ ಗಾಂಧಿ ಅವರ ಮೇಲೆ ಹಾಕಿದ್ದಾರೆ ಎಂದು ಸಿರೋಯಾ ಟೀಕಿಸಿದರು. “ಸಿದ್ದರಾಮಯ್ಯ ತಮ್ಮ ಪುತ್ರರನ್ನು ಉಪಮುಖ್ಯಮಂತ್ರಿಯಾಗಿಸಲು ಮಾತುಕತೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ವಂಶಪಾರಂಪರ್ಯ ರಾಜಕಾರಣದ ಹೊರತಾಗಿ ಯೋಚನೆ ಸಾಧ್ಯವಿಲ್ಲ” ಎಂದು ಹೇಳಿದರು.

ಕರ್ನಾಟಕದಂತಹ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ರಾಜ್ಯ ದುರದೃಷ್ಟವಶಾತ್ ಕಾಂಗ್ರೆಸ್‌ಗೆ ಎಟಿಎಂ ಆಗಿ ಮಾರ್ಪಟ್ಟಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ದೋಚಾಟದಿಂದ ರಾಜ್ಯ ಮುಕ್ತವಾಗಬೇಕಾದರೆ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು.

ಮುಂದಿನ ದಿನಗಳಲ್ಲಿ ಕರ್ನಾಟಕದ ಜನರು ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವು ಅಧಿಕಾರಕ್ಕೆ ಬಂದರೆ ಮಾತ್ರ ಕರ್ನಾಟಕ ಲೂಟಿಯ ಹಿಡಿತದಿಂದ ಮುಕ್ತವಾಗಲು ಸಾಧ್ಯವಾಗುತ್ತದೆ ಎಂದು ಲಹರ್ ಸಿಂಗ್ ಹೇಳಿದರು.

RELATED ARTICLES
- Advertisment -
Google search engine

Most Popular