Thursday, June 11, 2026
Google search engine

Homeದೇಶ‘ಇವನ್ನೇ ತಿನ್ನಿಸಿ…’ ಎನ್‌ ಡಿಎ ಸಭೆಯಲ್ಲಿ ಪ್ರಧಾನಿ ಮೋದಿಗೆ ಝಲ್ ಮುರಿ ಸವಿಸಿದ ಸುವೇಂದು ಅಧಿಕಾರಿ

‘ಇವನ್ನೇ ತಿನ್ನಿಸಿ…’ ಎನ್‌ ಡಿಎ ಸಭೆಯಲ್ಲಿ ಪ್ರಧಾನಿ ಮೋದಿಗೆ ಝಲ್ ಮುರಿ ಸವಿಸಿದ ಸುವೇಂದು ಅಧಿಕಾರಿ

ನವದೆಹಲಿ : ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿ ಐತಿಹಾಸಿಕ 12 ವರ್ಷಗಳನ್ನು ಪೂರೈಸಿದೆ. ಇದರೊಂದಿಗೆ ಅತ್ಯಂತ ದೀರ್ಘಕಾಲದವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನೂ ಪ್ರಧಾನಿ ಮೋದಿ ಬರೆದಿದ್ದಾರೆ. ಈ ಸಂಭ್ರಮದ ಸಂದರ್ಭದಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಒಕ್ಕೂಟದ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ಒಂದು ಆಸಕ್ತಿದಾಯಕ ದೃಶ್ಯ ಕಂಡುಬಂದಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪ್ರಧಾನಿ ಮೋದಿಯವರಿಗೆ ಬಂಗಾಳದ ಖ್ಯಾತ ಲಘು ಆಹಾರವಾದ ‘ಝಲ್ ಮುರಿ’ (ಮಂಡಕ್ಕಿ ಒಗ್ಗರಣೆ/ಚುರುಮುರಿ) ಸವಿಯಲು ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪ್ರಧಾನಿ ಮೋದಿಯವರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ” ಎನ್‌ಡಿಎ ಸಭೆಯಲ್ಲಿ ಸಹೋದ್ಯೋಗಿಗಳೊಂದಿಗೆ ಝಲ್ ಮುರಿ ಸವಿಯಲಾಯಿತು” ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಬಂಗಾಳ ಚುನಾವಣೆಯ ಸಂದರ್ಭದಲ್ಲಿ ಝಲ್ ಮುರಿ ದೊಡ್ಡ ಸುದ್ದಿಯಾಗಿತ್ತು. ಝಾರ್‌ ಗ್ರಾಮ್ ರ‍್ಯಾಲಿ ವೇಳೆ ಪ್ರಧಾನಿ ಮೋದಿಯವರು ರಸ್ತೆ ಬದಿಯ ಅಂಗಡಿಯಲ್ಲಿ ಝಲ್ ಮುರಿ ತಿನ್ನುತ್ತಾ, “ನಾನು ಈರುಳ್ಳಿ ತಿನ್ನುತ್ತೇನೆ, ಆದರೆ ಜನರ ತಲೆ ತಿನ್ನಲ್ಲ” ಎಂದು ತಮಾಷೆ ಮಾಡಿದ್ದರು.
ಪ್ರಧಾನಿಯಾಗಿ 4,399 ದಿನಗಳನ್ನು ಪೂರೈಸುವ ಮೂಲಕ ಮೋದಿ ಅವರು ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಮೀರಿಸಿದ್ದಾರೆ.

ಸಚಿವ ಸಂಪುಟದ ಅಭಿನಂದನೆ

ಕೇಂದ್ರ ಸಚಿವ ಸಂಪುಟವು ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿ ನಿರ್ಣಯ ಅಂಗೀಕರಿಸಿತು. ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿಯವರ ಈ ಐತಿಹಾಸಿಕ ಸಾಧನೆಯನ್ನು ಗೌರವಿಸಿದರು.

RELATED ARTICLES
- Advertisment -
Google search engine

Most Popular