ಕನಕಪುರ: ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ನಗರಸಭೆಯಲ್ಲಿ ಆಯುಕ್ತರು ಸಿಬ್ಬಂದಿಗಳು ಖಾಲಿಯಾಗಿ ಎರಡು ಮೂರು ತಿಂಗಳು ಕಳೆದರೂ ಇದುವರೆಗೂ ಅಧಿಕಾರಿಗಳಾಗಲಿ ಸಂಬಂಧಪಟ್ಟ ಸಿಬ್ಬಂದಿಗಳಾಗಲಿ ನೇಮಿಸಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಆಯುಕ್ತರನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ನೇಮಿಸಲು ನಗರಸಭಾ ನಿಕಟ ಪೂರ್ವ ಸದಸ್ಯ ಸ್ಟುಡಿಯೋ ಚಂದ್ರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಯಾವುದೇ ಕೆಲಸಗಳು ನಗರಸಭೆಯಲ್ಲಿ ನಡೆಯುತ್ತಿಲ್ಲ. ಇನ್ನಾದರೂ ಮುಖ್ಯಮಂತ್ರಿಗಳು ಈ ಕ್ಷೇತ್ರದ ಶಾಸಕರು ಅಧಿಕಾರಿಗಳನ್ನು ನೇಮಿಸಬೇಕಾಗಿ, ಒತ್ತಾಯಿಸುತ್ತಿದ್ದೇನೆ. ಖಾಲಿರುವ ಹುದ್ದೆಗಳು ಇಂಜಿನಿಯರ್ ಸೆಕ್ಷನ್ ಎರಡು ಹೆಲ್ತ್ ಡಿಪಾರ್ಟ್ಮೆಂಟ್ ಕಂದಾಯ ಇಲಾಖೆ ಬಿಲ್ ಕಲೆಕ್ಟ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿದ್ದು ಇದನ್ನ ಭರ್ತಿ ಮಾಡಬೇಕಾಗಿ ಸ್ಟುಡಿಯೋ ಚಂದ್ರು ಒತ್ತಾಯಿಸಿದ್ದಾರೆ.



