Saturday, April 19, 2025
Google search engine

Homeರಾಜ್ಯಬಸವನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ನಾಯಕರಾಗುತ್ತಾರೆ: ಡಾ. ಯಶ್ವಂತ ಗುರೂಜಿ ಭವಿಷ್ಯ

ಬಸವನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ನಾಯಕರಾಗುತ್ತಾರೆ: ಡಾ. ಯಶ್ವಂತ ಗುರೂಜಿ ಭವಿಷ್ಯ

ತುಮಕೂರು: ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕರಾಗುತ್ತಾರೆಂದು ನೊಣವಿನಕೆರೆಯ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಗ್ರಹ-ಗತಿಗಳ ಬಲಾಬಲಗಳನ್ನ ತಾಳೆ ಹಾಕಿ ನೋಡಿದರೆ ಯತ್ನಾಳ್‌ ರೇ ವಿರೋಧ ಪಕ್ಷದ ನಾಯಕರಾಗಲಿದ್ದು, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮುಂಬರುವ ಅಮಾವಾಸ್ಯೆ ಬಳಿಕ ತಕ್ಷಣವೇ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗ್ತಾರೆ. ವಿರೋಧ ಪಕ್ಷದ ನಾಯಕ ಯಾರು ಆಗ್ತಾರೆ ಅಂತಾ ಕೆಲವರು ನನ್ನನ್ನು ಕೇಳಿದ್ರು. ಎಲ್ಲಾ ನಾಯಕರ ಜಾತಕಗಳ ಬಲಾಬಲಗಳನ್ನ ತಾಳೆ ಹಾಕಿ, ವಿಮರ್ಶೆ ಮಾಡಿ ನೋಡಲಾಗಿದೆ. ಶಕ್ತಿಗಿಂತ ಗ್ರಹಗತಿಗಳ ಬಲಾಬಲಗಳ ಆಧಾರದ ಮೇಲೆ  ಯತ್ನಾಳ್‌ ಗೆ ಆ ಯೋಗ ಇದೆ ಎಂದರು.

RELATED ARTICLES
- Advertisment -
Google search engine

Most Popular