Thursday, June 18, 2026
Google search engine

Homeರಾಜಕೀಯಅಧಿಕಾರಕ್ಕಾಗಿ ದೇವೇಗೌಡರು ಯಾರನ್ನೂ ಕೇಳಿಲ್ಲ : ರಾಜ್ಯಸಭೆ ಸ್ಥಾನ ತಪ್ಪಿದ ಬಗ್ಗೆ ರೇವಣ್ಣರ ಪ್ರತಿಕ್ರಿಯೆ

ಅಧಿಕಾರಕ್ಕಾಗಿ ದೇವೇಗೌಡರು ಯಾರನ್ನೂ ಕೇಳಿಲ್ಲ : ರಾಜ್ಯಸಭೆ ಸ್ಥಾನ ತಪ್ಪಿದ ಬಗ್ಗೆ ರೇವಣ್ಣರ ಪ್ರತಿಕ್ರಿಯೆ

ಬೆಂಗಳೂರು : ಹೆಚ್​.ಡಿ. ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್​​.ಡಿ. ರೇವಣ್ಣ, ದೇವೇಗೌಡರು ಅಧಿಕಾರಕ್ಕಾಗಿ ಎಂದಿಗೂ ಯಾರ ಬಾಗಿಲಿಗೂ ಹೋಗಿಲ್ಲ. ಪ್ರಧಾನಮಂತ್ರಿ ಹುದ್ದೆಯನ್ನೇ ಅವರು ತ್ಯಾಗ ಮಾಡಿದ್ದರು ಎಂಬುದನ್ನು ಅವರು ನೆನಪಿಸಿದ್ದಾರೆ.

ರಾಜ್ಯಸಭಾ ಸ್ಥಾನಕ್ಕಾಗಿ ದೇವೇಗೌಡರು ಅಥವಾ ಕುಮಾರಸ್ವಾಮಿಯವರು ಯಾರನ್ನೂ ಕೇಳಿರಲಿಲ್ಲ. ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರು ಮತ್ತು ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಎಂದು ಸುಮಲತಾ ಅಂಬರೀಶ್ ಅವರ ಹೆಸರನ್ನು ಪ್ರಸ್ತಾಪಿಸಿದ ರೇವಣ್ಣ, ಅವರಿಗೂ ಟೋಪಿ ಹಾಕಲಾಯಿತು ಎಂದು ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular